ಇಸ್ಲಮಾಬಾದ್,
ಏ 18, ಪಾಕಿಸ್ತಾನದಲ್ಲಿ ಕೊರೊನಾ ಪ್ರಕರಣಗಳು 7481ಕ್ಕೇರಿಕೆಯಾಗಿದ್ದು 143
ಜನರು ಮೃತಪಟ್ಟಿದ್ದಾರೆ. ದೇಶದಲ್ಲಿ ಪ್ರತಿನಿತ್ಯ ಕೊರೋನಾ ಪ್ರಕರಣಗಳು ಹೆಚ್ಚುತ್ತಿರುವ
ಕುರಿತು ಅಲ್ಲಿನ ಆರೋಗ್ಯ ಸಚಿವಾಲಯ ಆತಂಕ ವ್ಯಕ್ತಪಡಿಸಿದೆ. ಆರೋಗ್ಯದಲ್ಲಿ
ಪ್ರಧಾನಿಯ ವಿಶೇಷ ಸಹಾಯಕ ಜಾಫರ್ ಮಿರ್ಜಾ ಆರೋಗ್ಯಾಧಿಕಾರಿಗಳೊಂದಿಗೆ ಶನಿವಾರ ಸಭೆ
ನಡೆಸಿದ್ದು, ಏಪ್ರಿಲ್ ತಿಂಗಳಲ್ಲಿ ಸೋಂಕಿತರ ಸಂಖ್ಯೆ ಆತಂಕಕಾರಿಯಾಗಿ
ಹೆಚ್ಚಳವಾಗುತ್ತಿದೆ ಎಂದಿದ್ದರು. ಸಚಿವಾಲಯ ಮಾಹಿತಿ ಪ್ರಕಾರ, ಏಪ್ರಿಲ್ 17ರವರೆಗೆ ಸೋಂಕಿತರ ಸಂಖ್ಯೆ 5,442ಕ್ಕೇರಿಕೆಯಾಗಿದೆ. ಇದು ಮಾರ್ಚ್ ಅಂತ್ಯಕ್ಕೆ 2,039ರಷ್ಟಿತ್ತು. ಪಾಕಿಸ್ತಾನದಲ್ಲಿ
ಇಲ್ಲಿಯವರೆಗೆ 92,548 ತಪಾಸಣೆಗಳನ್ನು ನಡೆಸಲಾಗಿದೆ. ಪೂರ್ವ ಪಂಜಾಬ್ ಪ್ರಾಂತ್ಯದಲ್ಲಿ
3391 ಹಾಗೂ ದಕ್ಷಿಣ ಸಿಂಧ್ ಪ್ರಾಂತ್ಯದಲ್ಲಿ 2,217 ಪ್ರಕರಣಗಳು ಪತ್ತೆಯಾಗಿವೆ.