13 ತಿಂಗಳ ಎಚ್ ಡಿ ಕುಮಾರಸ್ವಾಮಿ ಸರ್ಕಾರದ ಪತನಕ್ಕೆ ಕ್ಷಣಗಣನೆ

ಬೆಂಗಳೂರು, ಜು 19  ಹದಿಮೂರು ಕಾಂಗ್ರೆಸ್ ಶಾಸಕರು, ಮೂವರು ಜೆಡಿಎಸ್ ಶಾಸಕರ ರಾಜೀನಾಮೆಯ ನಂತರ ಹಲವು ವಿಚಿತ್ರ ರಾಜಕೀಯ ತಿರುವುಗಳಿಗೆ ತಿರುಗಿದ್ದ  ರಾಜ್ಯದ ರಾಜಕೀಯ.ರಾಜ್ಯಪಾಲ ವಜೂಭಾಯಿ ವಾಲಾ ಅವರ ಸೂಚನೆಯಂತೆ, ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಇಂದು ವಿಧಾನಸಭೆಯಲ್ಲಿ ವಿಶ್ವಾಸಮತ ಯಾಚನೆ ಮಂಡಿಸುವ ಮೂಲಕ  ಮೈತ್ರಿ ಸರ್ಕಾರ  ಪತನದ ಕ್ಷಣಗಣನೆ ಆರಂಭವಾಗಿದೆ. ಮಹತ್ವದ ರಾಜಕೀಯ ಬೆಳವಣಿಗೆಯಲ್ಲಿ ಶುಕ್ರವಾರ ಮಧ್ಯಾಹ್ನದೊಳಗೆ ಸದನದಲ್ಲಿ ವಿಶ್ವಾಸಮತ ಕೋರುವಂತೆ ರಾಜ್ಯಪಾಲರು ಸೂಚನೆ ನೀಡಿದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿ ವಿಧಾನಸಭೆಯಲ್ಲಿ ವಿಶ್ವಾಸಮತ ಯಾಚಿಸಿ, ವಿದಾಯದ ಭಾಷಣ ಮಾಡುವ ಮೂಲಕ ಪದತ್ಯಾಗ ಮಾಡುವ ಪರೋಕ್ಷ ಇಂಗಿತವನ್ನೂ ವ್ಯಕ್ತಪಡಿಸಿದ್ದಾರೆ. ವಿಶ್ವಾಸಮತವನ್ನು ಬೇಗನೆ ಯಾಚನೆ ಮಾಡಬೇಕು, ಕಾಲ ವಿಳಂಬ ಮಾಡಬಾರದು ಎಂದು ಬಿಜೆಪಿ  ಸದಸ್ಯರು ಒತ್ತಾಯ ಮಾಡಿ ನಿನ್ನೆ ರಾತ್ರಿಯಿಂದ ವಿಧಾನಸೌಧದಲ್ಲೇ ಅಹೋರಾತ್ರಿ ಧರಣಿ ಕೈಗೊಂಡಿದ್ದರು  ಯಡಿಯೂರಪ್ಪ ವಿಧನಸಭೆಯಲ್ಲೆ ಮಲಗಿದ್ದರು.  ಹದಿಮೂರು ತಿಂಗಳ ಅವಧಿಯಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು, ಎರಡನೇ ಬಾರಿಗೆ ಇಂದು ವಿಶ್ವಾಸಮತ ಯಾಚನೆ ಮಾಡುತ್ತಿದ್ದಾರೆ. ಈ ನಡುವೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿರುವ, 15 ಕ್ಕೂ ಹೆಚ್ಚು ಕಾಂಗ್ರೆಸ್ ಮತ್ತು ಜೆಡಿಎಸ್ ಶಾಸಕರು ಸದನದ ಕಲಾಪದಿಂದ ದೂರ ಉಳಿದು ಮುಂಬೈ ಹೋಟೆಲ್ ನಲ್ಲಿಯೇ ವಾಸ್ತವ್ಯ ಹೂಡಿದ್ದಾರೆ. ನಾಳೆಯಿಂದ ರಾಜ್ಯದ ರಾಜಕೀಯ ಕವಲು  ದಾರಿ ಹಿಡಿಯುವ ಲಕ್ಷಣ ಗೋಚರಿಸಿದೆ