ಬೆಂಗಳೂರು, ಮಾ.30, ಸರ್ಕಾರಿ ಸೌಮ್ಯದ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಕೊರೊನಾ ವೈರಸ್ ಭೀತಿಯನ್ನು ಹಿಮ್ಮೆಟ್ಟಿ ಆನ್ಲೈನ್ ಮೂಲಕ 9500 ಕ್ಕೂ ಹೆಚ್ಚು ಬ್ರಾಂಚ್ ಮ್ಯಾನೇಜರ್ ಗಳಿಗೆ ಡಿಜಿಟಲ್ ತರಬೇತಿ ನೀಡುತ್ತಿದೆ. ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾವು ಕಾರ್ಪೋರೇಷನ್ ಬ್ಯಾಂಕ್ ಮತ್ತು ಆಂಧ್ರ ಬ್ಯಾಂಕ್ ಜೊತೆಗೆ ವಿಲೀನಗೊಳ್ಳುತ್ತಿದ್ದು ಗ್ರಾಹಕರಿಗೆ ವಿನೂತನ ಡಿಜಿಟಲ್ ಸೇವೆ ನೀಡಲು ತನ್ನ ಉದ್ಯೋಗಿಗಳಿಗೆ ತರಬೇತಿ ನೀಡುತ್ತಿದೆ. ಕೊರೊನಾ ವೈರಸ್ ಭೀತಿಯಿಂದ ಹಾಗು ಸರ್ಕಾರ ಲಾಕ್ ಡೌನ್ ಘೋಷಣೆ ಮಾಡಿರುವ ಹಿನ್ನೆಲೆಯಲ್ಲಿ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಈ ವಿನೂತನ ಮಾರ್ಗದ ಮೂಲಕ ತನ್ನ ಮ್ಯಾನೇಜರ್ ಗಳಿಗೆ ತರಬೇತಿ ನೀಡಲು ಮುಂದಾಗಿದೆ. ಇದಕ್ಕಾಗಿ ಬ್ಯಾಂಕ್ ಇ-ಕಲಿಕೆ ವೇದಿಕೆಯ ನಿರ್ಮಾಣ ಮಾಡಿದೆ. ಮ್ಯಾನೇಜರ್ಸ್ ಮತ್ತು ಇಕ್ಸಿಕ್ಯೂಟಿವ್ಸ್ ವೀಡಿಯೋ ಕ್ಯಾನ್ಫರೆನ್ಸ್, ಡಿಜಿಟಲ್ ಟೂಲ್ಸ್ ಮೂಲಕ ತರಬೇತಿ ಪಡೆಯುತ್ತಿದ್ದಾರೆ. ಬ್ಯಾಂಕಿನ ಎಲ್ಲಾ 75000 ನೌಕರರನ್ನು ತಯಾರು ಮಾಡುವ ಗುರಿಯನ್ನು ಹೊಂದಿದೆ.ಆಂಧ್ರ ಬ್ಯಾಂಕ್ ಮತ್ತು ಕಾರ್ಪೊರೇಷನ್ ಬ್ಯಾಂಕ್ ಅನ್ನು ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದೊಂದಿಗೆ ವಿಲೀನಗೊಳಿಸುವುದು ಬಹುದೊಡ್ಡ ಮತ್ತು ಹೆಚ್ಚು ಪರಿಣಾಮಕಾರಿ ಬ್ಯಾಂಕುಗಳ ಉದ್ದೇಶಕ್ಕೆ ಸಂಪೂರ್ಣ ನಾಂದಿಹಾಡಲಿದೆ ಎಂದು ಪ್ರಕಟಣೆ ತಿಳಿಸಿದೆ.