ಪುಣೆ, ಜೂ 2, ಮಹಾರಾಷ್ಟ್ರದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 70 ಸಾವಿರಕ್ಕೇರಿಕೆಯಾಗಿದೆ. ಕಳೆದ 24 ಗಂಟೆಗಳಲ್ಲಿ 2361 ಹೊಸ ಪ್ರಕರಣಗಳು ವರದಿಯಾಗಿದ್ದು, 76 ಜನರು ಮೃತಪಟ್ಟಿದ್ದಾರೆ. ಥಾನೆ ಜಿಲ್ಲೆಯಲ್ಲಿ 9941 ಪ್ರಕರಣಗಳಿದ್ದು, ಇದು ರಾಜ್ಯದ ಎರಡನೇ ಅತಿ ಹೆಚ್ಚು ಸೋಂಕಿತ ಜಿಲ್ಲೆಯಾಗಿ ಗುರುತಿಸಿಕೊಂಡಿದೆ. ಸೋಮವಾರ ಒಂದೇ ದಿನ ರಾಜ್ಯದಲ್ಲಿ 60 ಜನರು ಮೃತಪಟ್ಟಿದ್ದಾರೆ. ಇಲ್ಲಿ ಪ್ರತಿ 19 ನಿಮಿಷಗಳಿಗೆ ಒಂದು ಸಾವು ಉಂಟಾಗುತ್ತಿದ್ದು, ಗಂಟೆಗೆ 98 ಹೊಸ ಪ್ರಕರಣಗಳು ಪತ್ತೆಯಾಗುತ್ತಿವೆ. ರಾಜ್ಯದಲ್ಲಿ ಇಲ್ಲಿಯವರೆಗೆ 2362 ಮಂದಿ ಮೃತಪಟ್ಟಿದ್ದಾರೆ. 37,534 ಸಕ್ರಿಯ ಪ್ರಕರಣಗಳಿವೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.