ಬ್ರೆಜಿಲ್‌ನಲ್ಲಿ 24 ಗಂಟೆಯಲ್ಲಿ ಕರೋನ ಸೋಂಕಿಗೆ 1,179 ಬಲಿ

ರಿಯೊ ಡಿ ಜನೇರಿಯೊ, ಮೇ 20, ಬ್ರೆಜಿಲ್‌ನಲ್ಲಿ ಕಳದೆ 24 ಗಂಟೆಗಳ ಅವಧಿಯಲ್ಲಿ  ಕರೋನಸೋಂಕಿನಿಂದ  ಸಾವನ್ನಪ್ಪಿದವರ ಸಂಖ್ಯೆ  1,179 ಏರಿಕೆಯಾಗಿದೆ  ಎಂದು ದೇಶದ ಆರೋಗ್ಯ ಸಚಿವಾಲಯ ತಿಳಿಸಿದೆ.
ಇದೆ ಅವಧಿಯಲ್ಲಿ  ದೇಶದಲ್ಲಿ 17,408 ಹೊಸ ಕರೋನ ಸೋಂಕು ಪ್ರಕರಣ ವರದಿಯಾಗಿದ್ದು, ಈವರೆಗೆ  ಒಟ್ಟು ಪ್ರಕರಣಗಳ ಸಂಖ್ಯೆ 271,628 ಕ್ಕೆ ತಲುಪಿದೆ ಎಂದು ಸಚಿವಾಲಯ ತಿಳಿಸಿದೆ. ಮೇ 12 ವರೆಗೆ 881 ಜನರು  ಕರೋನ ಸೋಂಕಿನಿಂದಮೃತಪಟ್ಟಿದ್ದಾರೆ.  ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ಮಾರ್ಚ್ 11 ರಂದು ಹೊಸ ಕರೋನವೈರಸ್ ಅನ್ನು ಸಾಂಕ್ರಾಮಿಕ ರೋಗ ಎಂದು ಘೋಷಿಸಿತು.ಡಬ್ಲ್ಯುಎಚ್‌ಒ ಪ್ರಕಾರ, ಜಾಗತಿಕ ಕರೋನ ಸೋಂಕಿನಿಂದ ಈವರೆಗೆ  ಸತ್ತವರ ಸಂಖ್ಯೆ 316,000  ಮೀರಿದ್ದು,  ವಿಶ್ವಾದ್ಯಂತ ಸೋಂಕು ಪ್ರಕರಣಗಳ ಸಂಖ್ಯೆ 4.7 ಮಿಲಿಯನ್ ದಾಟಿದೆ.