ಲೋಕದರ್ಶನ ವರದಿ
ರಾಣೇಬೆನ್ನೂರು: ಏ.21: ಬಡವರು ಕೂಲಿಕಾಮರ್ಿಕರು, ಪೌರಕಾಮರ್ಿಕರು ತಮ್ಮ ನಿತ್ಯದ ಬದುಕನ್ನು ಸಾಗಿಸುವುದು ಇಂದಿನ ಸಂಕಷ್ಟದ ಸಮಯದಲ್ಲಿ ಕಷ್ಟ ಸಾಧ್ಯವಾಗಿದೆ. ಇದ್ದವರು ಇಲ್ಲದವರಿಗೆ ಸಹಾಯ ಹಸ್ತವನ್ನು ನೀಡುವುದೇ ನಿಜವಾದ ಮಾನವ ಧರ್ಮವಾಗಿದೆ. ಎಲ್ಲರೂ ದಾನಿಗಳಾಗಿ ಕನಿಷ್ಟ ಒಂದು ಹೊತ್ತಿಗಾದರೂ ಹಸಿದ ಹೊಟ್ಟೆಗೆ ಅನ್ನವನ್ನು ನೀಡಲು ಮುಂದಾಗಬೇಕು ಎಂದು ವರ್ತಕ ಡಾ|| ಸಂಜಯ್ ಎಂ. ನಾಯ್ಕ ಹೇಳಿದರು.
ಅವರು ಇಲ್ಲಿನ ನಗರಸಭಾ ಸಭಾಂಗಣ ಮತ್ತು ಸಕರ್ಾರಿ ಆಸ್ಪತ್ರೆಯಲ್ಲಿ ಮಂಗಳವಾರ ನಗರಸಭೆಯ ಪೌರ ಕಾಮರ್ಿಕರಿಗೆ ಮತ್ತು ಸಕರ್ಾರಿ ಆಸ್ಪತ್ರೆ ರೋಗಿಗಳಿಗೆ ತಮ್ಮ ಕುಟುಂಬದ ಪರವಾಗಿ ಸಾರ್ವಜನಿಕವಾಗಿ ಉಪಹಾರ, ಚಹಾ ವಿತರಿಸಿ ಮಾತನಾಡಿದರು.
ಕರೋನಾ ವೈರಸ್ ಅತೀಚಿ ವೇಗವಾಗಿ ಹರಡುವ ರೋಗ ಇದಾಗಿದ್ದು, ಇದಕ್ಕೆ ಯಾವುದೇ ಚುಚ್ಚುಮದ್ದು ಕಂಡು ಹಿಡಿಯಲು ಸಾಧ್ಯವಾಗಿಲ್ಲ. ಇದಕ್ಕೆ ಮದ್ದುಎಂದರೆ ಪರಸ್ಪರ ಅಂತರವನ್ನು ಕಾಯ್ದುಕೊಳ್ಳುವುದು, ಮಾಸ್ಕ್ ಧರಿಸುವುದು, ಸ್ಯಾನಿಟರಿ ಬಳಸುವುದು, ಅಲ್ಲದೇ, ಕುಟುಂಬದ ಪ್ರತಿಯೊಬ್ಬರೂ ತಮ್ಮ ಮನೆಗಳಲ್ಲಿ ಸ್ವಯಂ ಗೃಹ ದಿಗ್ಭಂಧನ ವಿಧಿಸಿಕೊಳ್ಳುವುದು ಒಂದೇ ದಾರಿಯಾಗಿದೆ ಎಂದರು. ಡಾ|| ಸಂಜಯ್ ನಾಯ್ಕ್ ಅವರ ಕುಟುಂಬದ ಸದಸ್ಯರು, ವರ್ತಕರು ಉಪಸ್ಥಿತರಿದ್ದರು. ಬಸವರಾಜ ನರಸಗೊಂಡರ, ಶಶಿಧರ ನಾಯ್ಕ್, ಚಂದನ್ ಸುರಳೀಕೇರಿಮಠ, ಬಸವರಾಜ ಹುಚ್ಚಗೊಂಡರ, ಆರೋಗ್ಯ ಅಧಿಕಾರಿ ಜಗದೀಶ್ ವೈ.ಕೆ, ತಾಲೂಕಾ ಆರೋಗ್ಯಾಧಿಕಾರಿ ಡಾ|| ಜಿ.ಸಂತೋಷ ಕುಮಾರ, ಡಾ|| ಕಿರಣ್ ನಾಡಗೇರ ಸೇರಿದಂತೆ ಮತ್ತಿತರರು ಪಾಲ್ಗೊಂಡಿದ್ದರು.