ಮೂರು ಕ್ಲಬ್ ಗಳಿಂದ ಆರು ಜನರಲ್ಲಿ ಕೊರೊನಾ ವೈರಸ್ ದೃಢ: ಪ್ರಿಮಿಯರ್ ಲೀಗ್

ಲಂಡನ್, ಮೇ 20, ವಾಟ್ಫೋರ್ಡ್ ಮತ್ತು ಬರ್ನ್ಲಿಯ ಒಟ್ಟು ಆರು ಆಟಗಾರರು ಮತ್ತು ಕ್ಲಬ್ ಸಿಬ್ಬಂದಿಯಲ್ಲಿ  ಕೊರೊನಾ ವೈರಸ್ ಸೋಂಕು ತಲುಗಿರುವುದು ಧೃಡಪಟ್ಟಿದೆ ಎಂದು ಪ್ರೀಮಿಯರ್ ಲೀಗ್ ಸ್ಪಷ್ಟಪಡಿಸಿದೆ.ಸಹಾಯಕ ವ್ಯವಸ್ಥಾಪಕ ಇಯಾನ್ ವೊನ್ ಅವರಲ್ಲಿ ರೋಗಲಕ್ಷಣವಿಲ್ಲದ ಇದ್ದರೂ ಕೊರೊನಾ ಕಾಣಿಸಿಕೊಂಡಿದೆ ಎಂದು ಬಹಿರಂಗಪಡಿಸಿದರು.ಭಾನುವಾರ ಮತ್ತು ಸೋಮವಾರ ಒಟ್ಟು 748 ಆಟಗಾರರು ಮತ್ತು ಕ್ಲಬ್ ಸಿಬ್ಬಂದಿಯನ್ನು ಪರೀಕ್ಷಿಸಲಾಗಿದೆ ಎಂದು ಪ್ರೀಮಿಯರ್ ಲೀಗ್ ಮಂಗಳವಾರ ಹೇಳಿದೆ, "ಈ ಪೈಕಿ ಆರು ಮಂದಿ ಮೂರು ಕ್ಲಬ್‌ಗಳಲ್ಲಿನ ಆಟಗಾರರಲ್ಲಿ ವೈರಸ್ ಕಾಣಿಸಿಕೊಂಡಿದೆ""ಸೋಂಕು ಹೊಂದಿದ ಆಟಗಾರರು ಅಥವಾ ಕ್ಲಬ್ ಸಿಬ್ಬಂದಿ ಗೃಹ ಬಂಧನಲ್ಲಿದ್ದಾರೆ ಎಂದು ಪ್ರೀಮಿಯರ್ ಲೀಗ್ ಹೇಳಿದೆ.ಕೊರೊನಾ ವೈರಸ್ ಏಕಾಏಕಿ ವೇಗವಾಗಿ ಹಬ್ಬುತ್ತಿದ್ದರಿಂದ ಮಾರ್ಚ್ 13 ರಂದು ಇಂಗ್ಲೆಂಡ್‌ನಲ್ಲಿ ಫುಟ್‌ಬಾಲ್ ಲೀಗ್ ಅನ್ನು ಸ್ಥಗಿತಗೊಳಿಸಿದ ನಂತರ ಪ್ರೀಮಿಯರ್ ಲೀಗ್ ಕ್ಲಬ್‌ಗಳಿಗೆ ಮಂಗಳವಾರದಿಂದ ತರಬೇತಿಯನ್ನು ಪ್ರಾರಂಭಿಸಲು ಅವಕಾಶ ನೀಡಲಾಗಿದೆ.