ಗದಗ 08: ತೀವ್ರ ಉಸಿರಾಟದ ತೊಂದರೆಯಿಂದಾಗಿ ಜಿಮ್ಸ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದ ಗದಗ-ಬೆಟಗೇರಿ ನಗರದ ಪಿ-166 ಅವರ ಕಳುಹಿಸಲಾದ ಗಂಟಲು ದ್ರವ್ಯ ಲ್ಯಾಬ್ ಪರೀಕ್ಷೆಯಲ್ಲಿ ಕೊರೊನಾ ಸೊಂಕು ದೃಢಪಟ್ಟಿದ್ದು ಸೂಕ್ತ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಗದಗ ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ.ಪಾಟೀಲ ಅವರು ತಿಳಿಸಿದರು.
ಗದಗ ಜಿಲ್ಲಾಡಳಿತ ಭವನದಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಅವರು ಮಾತನಾಡಿದರು. ಪಿ-166 ರೊಂದಿಗೆ ಪ್ರಾಥಮಿಕ ಸಂಪರ್ಕದಲ್ಲಿದ್ದ ಒಟ್ಟು 44 ಜನರನ್ನು ವೈದ್ಯಕೀಯ ತಪಾಸಣೆಗೆ ಒಳಪಡಿಸಿ, ಕ್ವಾರಂಟೈನ್ ಮಾಡಲಾಗುತ್ತಿದೆ ಎಂದು ತಿಳಿಸಿದರು. ಸೋಂಕು ಪತ್ತೆಯಾದ ರಂಗನವಾಡ ಹಾಗೂ ಎಸ್.ಎಂ.ಕೃಷ್ಣಾ ನಗರದ ಪ್ರದೇಶವನ್ನು ನಿರ್ಬಂಧಿತ (ಕಂಟನ್ಮೆಂಟ್) ಪ್ರದೇಶವೆಂದು ಘೋಷಿಸಲಾಗಿದೆ. ಅಲ್ಲಿಯ ಜನರಿಗೆ ಬೇಕಾಗುವಂತಹ ಮೂಲಭೂತ ಸೌಲಭ್ಯ, ಆಹಾರ ಧಾನ್ಯಗಳನ್ನು ಒದಗಿಸಲು ಕ್ರಮ ಕೈಗೊಳ್ಳಲಾಗುವದು ಎಂದರು. ಸಾಕಷ್ಟು ಮುಂಜಾಗ್ರತಾ ಕ್ರಮಗಳ ಮಧ್ಯೆಯೂ ಒಂದು ಪ್ರಕರಣ ದೃಢ ಪಟ್ಟಿದೆ. ಲಾಕ್ಡೌನ್ ಮತ್ತಷ್ಟು ಬಿಗಿಗೊಳಿಸುವುದು ಅಗತ್ಯವಾಗಿದ್ದು ಸಾಮಾಜಿಕ ಅಂತರ ಕಾಪಾಡಲು ಹಾಗೂ ಸೊಂಕು ಹರಡದಂತೆ ನಿಗಾವಹಿಸಲು ಸಾರ್ವಜನಿಕರಿಗೆ ಅಗತ್ಯದ ತರಕಾರಿ, ದಿನಸಿ ಪದಾರ್ಥಗಳನ್ನು ನಿಬಂಧನೆಗಳೊಂದಿಗೆ ವಿತರಿಸಲು ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿದೆ. ಪಡಿತರಕ್ಕಾಗಿ ಜನರು ಗುಂಪು ಗೂಡುವುದನ್ನು ತಪ್ಪಿಸಲು ಎಲ್ಲ ನ್ಯಾಯ ಬೆಲೆ ಅಂಗಡಿಕಾರರು ವಾಡರ್್ ವಾರು ಹಂಚಿಕೆಗೆ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಅವರ ಪರವಾನಗಿ ರದ್ದುಗೊಳಿಸುವಂತೆ ಕ್ರಮ ವಹಿಸಲು ಜಿಲ್ಲಾಧಿಕಾರಿಗಳಿಗೆ ನಿದರ್ೆಶಿಸಲಾಗಿದೆ ಎಂದು ಸಚಿವ ಸಿ.ಸಿ.ಪಾಟೀಲ ತಿಳಿಸಿದರು.
ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಮಾತನಾಡಿ ಗದಗ-ಬೆಟಗೇರಿ ನಗರದ ಪಿ-166 ಸೊಂಕು ದೃಢಪಟ್ಟಿದ್ದು ಈ ಕುರಿತು ಶಿಷ್ಠಾಚಾರದ ಪ್ರಕಾರ ಸೊಂಕು ಹರಡದಂತೆ ಕೈಗೊಳ್ಳಬೇಕಾದ ಎಲ್ಲ ಮುಂಜಾಗ್ರತಾ ಕ್ರಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಲಾಗುತ್ತಿದೆ ಎಂದರು. ಗದಗ ಬೆಟಗೇರಿ ನಗರಸಭೆಯ ವಾರ್ಡ 31ರ ರಂಗನವಾಡ ಓಣಿ, ದತ್ತಾತ್ರೇಯ ಗುಡಿ ಉದರ್ುಶಾಲೆ ಮತ್ತು ಎಸ್.ಎಂ. ಕೃಷ್ಣಾ ನಗರದ ಸುತ್ತಲಿನ 500 ಮೀ. ಪ್ರದೇಶವನ್ನು ಕೊವಿಡ್-19 ತಡೆಗಟ್ಟುವ ಕ್ರಮವಾಗಿ ಕಂಟನ್ಮೆಂಟ ಪ್ರದೇಶವೆಂದು ಘೊಷಿಸಲಾಗಿದೆ. ನಿಯಂತ್ರಿತ ಪ್ರದೇಶದಿಂದ ಇತರೆ ಪ್ರದೇಶಗಳಿಗೆ ಅಥವಾ ಇತರೆ ಪ್ರದೇಶಗಳಿಂದ ನಿಯಂತ್ರಿತ ಪ್ರದೇಶಗಳಿಗೆ ಕರ್ತವ್ಯ ನಿರತ ಅಧಿಕಾರಿ ಸಿಬ್ಬಂದಿ ಹೊರತುಪಡಿಸಿ ಜನರ ಪ್ರವೇಶವನ್ನು ನಿರ್ಬಂಧಿಸಿದೆ. ಸೋಂಕು ಪೀಡಿತ ಪಿ-166 ಗೆ ಚಿಕಿತ್ಸೆ ನೀಡಿದ ವ್ಶೈದ್ಯ ಸಿಬ್ಬಂದಿಯೂ ಸೇರಿದಂತೆ ಒಟ್ಟು 44 ಜನರನ್ನು ನಿಗಾದಲ್ಲಿಟ್ಟು ಅವರ ಗಂಟಲು ದ್ರವ್ಯದ ಮಾದರಿಯನ್ನು ಪರೀಕ್ಷೆಗೆ ಕಳುಹಿಸಾಲಗಿದೆ ಎಂದರು.
ಜಿಲ್ಲಾ ಪಂಚಾಯತ ಅಧ್ಯಕ್ಷ ಸಿದ್ದಲಿಂಗೇಶ್ವರ.ಎಚ್.ಪಾಟೀಲ, ಶಾಸಕ ಎಚ್.ಕೆ.ಪಾಟೀಲ, ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಆನಂದ ಕೆ., ಜಿಲ್ಲಾ ಪೊಲಿಸ್ ವರಿಷ್ಠಾಧಿಕಾರಿ ಯತೀಶ ಎನ್., ಉಪಸ್ಥಿತರಿದ್ದರು.