ಟೋಕಿಯೋ, ಏ 2, ಜಪಾನ್ ನಲ್ಲಿ ಕೊರೊನಾ ವೈರಾಣು ಸೋಂಕಿತರ ಸಂಖ್ಯೆ 2524 ಕ್ಕೆ ಏರಿಕೆಯಾಗಿದೆ ಎಂದು ಆರೋಗ್ಯ ಸಚಿವಾಲಯ ಗುರುವಾರ ಬಿಡುಗಡೆ ಮಾಡಿರುವ ಅಂಕಿಅಂಶ ತಿಳಿಸಿದೆ.
ಕೊರೊನಾ ಸೋಂಕಿನಿಂದ ಜಪಾನ್ ನಲ್ಲಿ 82 ಜನರು ಸಾವನ್ನಪಿದ್ದಾರೆ. ಈ ಪೈಕಿ ಟೋಕಿಯೋ ಸಮೀಪದ ಯೋಕೋಹಮಾದಲ್ಲಿ ಪ್ರತ್ಯೇಕವಾಗಿರಿಸಲಾಗಿದ್ದು ಡೈಮಂಡ್ ಪ್ರಿನ್ಸಸ್ ಕ್ರ್ಯೂಸ್ ಹಡಗಿನಲ್ಲಿದ್ದವರು ಸೇರಿದ್ದಾರೆ. ಜಪಾನ್ ನ 2524 ಸೋಂಕಿತರ ಪೈಕಿ ಹೆಚ್ಚಿನ ಸಂಖ್ಯೆ ರಾಜಧಾನಿ ಟೋಕಿಯೋ ನಗರದಿಂದ ವರದಿಯಾಗಿದೆ. ಟೋಕಿಯೋದಲ್ಲಿ 587 ಜನರಿಗೆ ಕೊರೊನಾ ವೈರಾಣು ಸೋಂಕು ತಗುಲಿದೆ. 70 ಜನರ ಸ್ಥಿತಿ ಗಂಭೀರವಾಗಿದ್ದು ಕೆಲವರಿಗೆ ವೆಂಟಿಲೇಟರ್ ಅಳವಡಿಸಲಾಗಿದೆ ಮತ್ತು ಇನ್ನು ಕೆಲವರನ್ನು ತೀವ್ರ ನಿಗಾ ಘಟಕದಲ್ಲಿರಿಸಿ ಚಿಕಿತ್ಸೆ ನೀಡಲಾಗುತ್ತಿದೆ. 1091 ಜನರು ಗುಣಮುಖರಾಗಿದ್ದು ಅವರನ್ನು ಆಸ್ಪತ್ರೆಯಿಂದ ವಾಪಸ್ ಮನೆಗೆ ಕಳುಹಿಸಲಾಗಿದೆ ಎಂದು ಸಚಿವಾಲಯ ಮಾಹಿತಿ ನೀಡಿದೆ.