ಕೊರೋನಾ ವೈರಸ್ ಹಿನ್ನೆಲೆ: ಬಿ.ಟಿ.ಎಂ. ಬಡಾವಣೆ ವಿಧಾನಸಭಾ ಕ್ಷೇತ್ರದಲ್ಲಿ ನಿರ್ಗತಿಕರಿಗೆ ಮೂರು ಹೊತ್ತು ಉಚಿತ ಊಟ ವಿತರಣೆ : ರಾಮಲಿಂಗಾ ರೆಡ್ಡಿ

ಬೆಂಗಳೂರು, ಮಾ 31,ಕೊರೋನಾ ವೈರಸ್ ಸೋಂಕು ಭೀತಿ ಹಿನ್ನೆಲೆಯಲ್ಲಿ ಬಿ.ಟಿ.ಎಂ. ಬಡಾವಣೆ ವಿಧಾನಸಭಾ ಕ್ಷೇತ್ರದಲ್ಲಿ ಬಡವರು, ಕೂಲಿ ಕಾರ್ಮಿಕರು ನಿರ್ಗತಿಕರಿಗೆ ಮಾಜಿ ಗೃಹ ಸಚಿವ ಶಾಸಕ ರೆಡ್ಡಿ ದಿನದ ಮೂರು ಹೊತ್ತು ಊಟದ ವ್ಯವಸ್ಥೆ ಮಾಡಿದ್ದಾರೆ. ಬೆಳಿಗ್ಗೆ ತಿಂಡಿ, ಮಧ್ಯಾಹ್ನ ಮತ್ತು ರಾತ್ರಿ ಊಟದ ವ್ಯವಸ್ಥೆ ಕಲ್ಪಿಸಿದ್ದಾರೆ. ಬೆಳಗ್ಗೆ 8 ರಿಂದ 10 ಗಂಟೆವರೆಗೆ ಉಪಹಾರ, ಮಧ್ಯಾಹ್ನ 12 ರಿಂದ 2 ಗಂಟೆವರೆಗೆ ಮತ್ತು ಸಂಜೆ 7 ರಿಂದ ರಾತ್ರಿ 9 ಗಂಟೆವರೆಗೆ ಊಟದ ವ್ಯವಸ್ಥೆ ಕಲ್ಪಿಸಿದ್ದಾರೆ. ಈ ಕುರಿತು ಸುದ್ದಿಗಾರರ ಜತೆ ಮಾತನಾಡಿದ ರಾಮಲಿಂಗಾರೆಡ್ಡಿ, ಬಿ..ಟಿ.ಎಂ. ಲೇ ಔಟ್ ಕ್ಷೇತ್ರದಲ್ಲಿ ಅಗತ್ಯವಿರುವವರಿಗೆ ಕೊರೋನಾ ವೈರಸ್ ಸಮಸ್ಯೆ ಮುಗಿಯುವ ತನಕ ತಿಂಡಿ, ಊಟ ಪೂರೈಸಲಾಗುವುದು. ಪ್ರತಿದಿನ ಆರು ಸಾವಿರಕ್ಕೂ ಹೆಚ್ಚು ಜನರಿಗೆ ಸ್ವಯಂ ಸೇವಕರ ಮೂಲಕ ಆಹಾರ ವಿತರಿಸಲಾಗುವುದು ಎಂದರು. ಏಪ್ರಿಲ್ 14 ರವರೆಗೆ ಉಚಿತ ಊಟದ ವ್ಯವಸ್ಥೆ ಮಾಡಿದ್ದು, ಒಂದು ತಿಂಗಳು ಲಾಲ್ ಡೌನ್ ಆದರೂ ಸಹ ನಿರಂತರವಾಗಿ ಅಹಾರ ಪೊಟ್ಟಣಗಳನ್ನು ಹಂಚಲಾಗುವುದು. ಲಕ್ಕಸಂದ್ರ ಮನೆಯಿಂದ ಉಚಿತ ಊಟದ ವಾಹನಗಳು ಪ್ರತಿದಿನ ತೆರೆಳಲಿವೆ ಎಂದರು.