ತಂತ್ರಜ್ಞಾನಗಳ ಅನಾವರಣ: ನಗರದಲ್ಲಿ ಡಿಜಿ ಫೋಟೋ ಎಕ್ಸ್ಪೋ ಉದ್ಘಾಟನೆ

Technologies Unveiled: Digi Photo Expo inaugurated in the city

ತಂತ್ರಜ್ಞಾನಗಳ ಅನಾವರಣ: ನಗರದಲ್ಲಿ ಡಿಜಿ ಫೋಟೋ ಎಕ್ಸ್ಪೋ ಉದ್ಘಾಟನೆ

ಧಾರವಾಡ 25:  ಕಾಲ ಬದಲಾದಂತೆ ತಂತ್ರಜ್ಞಾನಗಳು ಕೂಡ ಬದಲಾಗುತ್ತಿವೆ ಹೊಸ ತಂತ್ರಜ್ಞಾನಗಳನ್ನು ಇಂತಹ ಛಾಯಾ ವಸ್ತುಪ್ರದರ್ಶನಗಳ ಮೂಲಕ ಅನಾವರಣ ಮಾಡುತ್ತಿವೆ  ಛಾಯಾಗ್ರಹಕರು ಅವುಗಳನ್ನು ಅಳವಡಿಸಿಕೊಳ್ಳಲು ಬಹಳ ಸಹಾಯಕಾರಿಯಾಗಿದೆ ಎಂದು ಇಂದು ನಗರದ ವಾಸವಿ ಮಹಲ್ ಇಲ್ಲಿ ಏರಿ​‍್ಡಸಿದಂತಹ ಬೃಹತ್ ಡಿಜಿ ಫೋಟೋ ಎಕ್ಸ್ಪೋ ಛಾಯಾ ವಸ್ತು ಪ್ರದರ್ಶನ ಉದ್ಘಾಟಿಸಿ ಕರ್ನಾಟಕ ಸರ್ಕಾರದ ಕಾರ್ಮಿಕ ಸಚಿವರಾದಂತಹ ಸಂತೋಷ್ ಲಾಡ್ ಮಾತನಾಡಿದರು.  

 ಹುಬ್ಬಳ್ಳಿಯಲ್ಲಿ  ವಸ್ತು ಪ್ರದರ್ಶನಕ್ಕೆ ದೊಡ್ಡ ಆವರಣದ  ಅವಶ್ಯಕತೆ ಇದೆ ಅದನ್ನು ಮುಖ್ಯಮಂತ್ರಿಗಳ ಜೊತೆ ಮಾತಾಡಿ ನನ್ನ ಅವಧಿಯಲ್ಲಿ ಹುಬ್ಬಳ್ಳಿ ಧಾರವಾಡಕ್ಕೆ ಒಂದು ಬೃಹತ್ ವಸ್ತು ಪ್ರದರ್ಶನ ಕೇಂದ್ರವನ್ನು ಪೂರೈಸಲಾಗುವುದು.  

ಇದೇ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ ಶಾಸಕರಾದ ಅರವಿಂದ ಬೆಲ್ಲದ ಮಾತನಾಡುತ್ತಾ ಪ್ರತಿ ಸಂದರ್ಭವನ್ನು ಕ್ಯಾಮೆರಾ ಮೂಲಕ ನೆನಪಿನಲ್ಲಿ ಉಳಿಯುವಂತಹ ದೃಶ್ಯವನ್ನು ಸೆರೆ ಹಿಡಿದು ಕೊಡುವ ಛಾಯಾಗ್ರಾಹಕರು ಮರೆಯಲಾಗದ ವ್ಯಕ್ತಿಗಳು ಅವರನ್ನು ಇಂತಹ ಸಂದರ್ಭದಲ್ಲಿ ಹಿರಿಯ ಛಾಯಾಗ್ರಾಹಾಕರಿಗೆ ಸನ್ಮಾನಿಸುತ್ತಿದ್ದು ಶ್ಲಾಘನಿಯವಾಗಿದೆ ಎಂದು ಹೇಳಿದರು. ಪ್ರಸ್ತಾವಿಕ ಭಾಷಣವನ್ನು ಮಾಡಿದ ಹುಬ್ಬಳ್ಳಿ ಫೋಟೋ ಹಾಗೂ ವಿಡಿಯೋ ಗ್ರಾಫರ್ ಸಂಘದ ಅಧ್ಯಕ್ಷರಾದ ಕಿರಣ್ ಬಾಕಳೆಯವರು ಮಾತನಾಡಿ ನಮ್ಮ ಸಂಘದ ವತಿಯಿಂದ ಹುಬ್ಬಳ್ಳಿಯಲ್ಲಿ ಏಳನೇ ಬಾರಿಗೆ ಇಂತಹ ವಸ್ತು ಪ್ರದರ್ಶನವನ್ನು ಏರಿ​‍್ಡಸಿದ್ದು ಉತ್ತರ ಕರ್ನಾಟಕದ ಎಲ್ಲ ಛಾಯಾಗ್ರಾಹಕರಿಗೆ ಅನುಕೂಲವಾಗಲಿದೆ ಕಾರ್ಮಿಕ ಸಚಿವರು ನಮ್ಮ ಸಂಘಕ್ಕೆ ತಮ್ಮ ಅವಧಿಯಲ್ಲಿ ಒಂದು ಸ್ವಂತ ಕಚೇರಿಯನ್ನು ಕೊಡಿಸಲು ವಾಗ್ದಾನ ಮಾಡಿದ್ದಕ್ಕೆ ಅವರಿಗೆ ಧನ್ಯವಾದಗಳನ್ನು ಅರ​‍್ಿಸಿದರು.  

ಇದೇ ಸಂದರ್ಭದಲ್ಲಿ ಸಂಘದ ಕಾರ್ಯದರ್ಶಿಗಳಾದ ರವೀಂದ್ರ ಕಾಟಿಗರ ಕಾರ್ಮಿಕ ಸಚಿವರಿಗೆ ಮನವಿಪತ್ರವನ್ನು ನೀಡಿದರು.ನಂತರ ಉದ್ಘಾಟಕರು ಹಾಗೂ ಅತಿಥಿಗಳು ಉತ್ತರ ಕರ್ನಾಟಕದ ಹಿರಿಯ ಛಾಯಾಗ್ರಾಹಕರಾದ ನಾಗೇಂದ್ರಸಾ ಪೂಜಾರಿ, ಕೃಷ್ಣಸ ಪಟ್ಟಣ, ರವೀಂದ್ರ ರಾಮಚಂದ್ರಸಾ ಕಾಟೀಗರ, ಭರತ್ ದಲ್ಬಂಜನ್, ಕಿಶೋರ್ ಮಗಜಿ, ಪ್ರಭಾಕರ ಕಲಬುರ್ಗಿ, ಎಲ್ಲಪ್ಪ ಶಿಂಗ್ರಿ, ನಿಂಗಪ್ಪ ಉಗುರಗೊಳ್, ಅಶೋಕ್ ಬಡಿಗೇರ್, ಉಮೇಶ್ ನಿಂಬಾಳ್ಕರ್, ಸಂತೋಷ್ ಖಿರೋಜಿ, ರವಿ ಕೋರೆ​‍್ಡ, ರಾಜೇಶ್ ನಂದಿ,  ಮಮ್ಮದ್ ಅಸ್ಲಾಂ ಖೋಜೆ, ಬಸವರಾಜ್ ಶೀಲವಂತ್ ಅವರಿಗೆ "ಉತ್ತರ ಕರ್ನಾಟಕ ಛಾಯಾ ರತ್ನ ಪ್ರಶಸ್ತಿ "ನೀಡಿ ಗೌರವಿಸಿ ಸನ್ಮಾನಿಸಿದರು. 

ಇದೆ ಸಂಧರ್ಭದಲ್ಲಿ ಕಾರ್ಮಿಕ ಇಲಾಖೆ ಇಂದ ಛಾಯಾಗ್ರಾಹಕರಿಗೆ ಸ್ಮಾರ್ಟ್‌ ಕಾರ್ಡ್‌ ಕೊಡಲಾಯತು ಎರಡು ದಿನಗಳ ಕಾಲ ನಡೆಯಲಿದ್ದು 26 ರಂದು ಸಂಜೆ 6 ಘಂಟೆಗೆ ಮುಕ್ತಾಯವಾಗಲಿದೆ ಸಂಘದ ಉಪಾಧ್ಯಕ್ಷರಾದ ದಿನೇಶ್ ದಾಬಡೆ ಕಾರ್ಯದರ್ಶಿಯಾದ ರವೀಂದ್ರ ಕಾಟಿಗರ್, ಖಜಾಂಚಿ ಅನಿಲ್ ತುರುಮರಿ ಹಾಗೂ ಸಂಘದ ಸದಸ್ಯರಾದ, ವಿನಾಯಕ ಸಫಾರೆ, ವಿಜಯ ಮೆಹರ್ವಾಡೆ, ಪ್ರಕಾಶ್ ಬಸವಾ, ಸುಜಾತಾ ಪೋತದಾರ್, ಆನಂದ ಮೇಹರವಾಡೆ, ಅಲ್ಲಾ ಬಾಕ್ಸ್‌ ಆದೋನಿ, ವಜೀರ್ ಮಹಮ್ಮದ್ ರಶೀದ್ ಧಾರವಾಡ್, ವಿಜಯ ಬಾಕಳೆ, ವಿನಾಯಕ್ ಬಾಕಳೆ, ಇದ್ದರು. ರಾಕೇಶ್ ಪವಾರ ಕಾರ್ಯಕ್ರಮವನ್ನು ನಿರೂಪಿಸಿದರು.