ಕೌಲಾಲಂಪುರ , ಫೆಬ್ರವರಿ 5, ಕರೋನವೈರಸ್ ಸೋಂಕು ತಗುಲಿದ್ದ ನಾಲ್ಕು ವರ್ಷದ ಚೀನಾದ ಪುಟ್ಟು ಮಗು ಈಗ ಸಂಪೂರ್ಣವಾಗಿ ಚೇತರಿಸಿಕೊಂಡಿದ್ದು, ಮತ್ತೆ ಚೀನಾಕ್ಕೆ ಹಿಂತಿರುಗಲು ಅವಕಾಶ ನೀಡಲಾಗುವುದು ಎಂದು ಮಲೇಷ್ಯಾ ಆರೋಗ್ಯ ಸಚಿವಾಲಯ ಮಂಗಳವಾರ ತಡರಾತ್ರಿ ತಿಳಿಸಿದೆ. ದೇಶದಲ್ಲಿ ದೃಢ ಪಡಿಸಿದ 10 ಪ್ರಕರಣಗಳಲ್ಲಿ ಬಾಲಕಿ ಒಬ್ಬರಾಗಿದ್ದು, ಜನವರಿ 29 ರಂದು ಸೋಂಕಿನ ಖಚಿತ ಬಗ್ಗೆ ನಡೆಸಲಾದ ಪರೀಕ್ಷೆಯ ನಂತರ ಚೇತರಿಸಿಕೊಂಡಿರುವ ಮೊಟ್ಟ ಮೊದಲನೆಯ ಪ್ರಕರಣ ಇದಾಗಿದೆ ಎಂದೂ ಆರೋಗ್ಯ ಸಚಿವಾಲಯದ ಮಹಾನಿರ್ದೇಶಕ ನೂರ್ ಹಿಶಮ್ ಅಬ್ದುಲ್ಲಾ ತಿಳಿಸಿದ್ದಾರೆ. ಜನಪ್ರಿಯ ಪ್ರವಾಸಿ ತಾಣವಾದ ಕೆಡಾ ರಾಜ್ಯದ ಲಂಗ್ಕಾವಿ ದ್ವೀಪದಲ್ಲಿ ರೋಗಿಗೆ ಚಿಕಿತ್ಸೆ ನೀಡಲಾಗುತ್ತಿತ್ತು ಸೋಂಕಿಗೆ ಸಂಬಂಧಿಸಿದಂತೆ 24 ಗಂಟೆಗಳ ಅವಧಿಯಲ್ಲಿ ಎರಡು ಬಾರಿ ಪರೀಕ್ಷೆ ಮಾಡಲಾಗಿದೆ ಎಂದೂ ಹಿಶಮ್ ಹೇಳಿದ್ದಾರೆ.