ಕೊರೋನಾವೈರಸ್‌: ಕೇರಳದಲ್ಲಿ 3014 ಜನರ ಮೇಲ ಕಣ್ಗಾವಲು

ತಿರುವನಂತಪುರಂ,  ಫೆ. 8  ಕಳೆದ ನಾಲ್ಕು ದಿನಗಳಿಂದ ಕೇರಳದಲ್ಲಿ ಕೊರೊನಾವೈರಸ್‌ನ ಯಾವುದೇ ಹೊಸ ಸಕಾರಾತ್ಮಕ ಪ್ರಕರಣಗಳು ವರದಿಯಾಗಿಲ್ಲವಾದರೂ, 3,014 ಜನರನ್ನು ರಾಜ್ಯದಲ್ಲಿ ಕಣ್ಗಾವಲಿನಲ್ಲಿ ಇರಿಸಲಾಗಿದ್ದು, ಈ ಪೈಕಿ 61 ಜನರು ರಾಜ್ಯದ  ವಿವಿಧ  ಆಸ್ಪತ್ರೆಗಳ ಪ್ರತ್ಯೇಕ ವಾರ್ಡ್‌ ದಾಖಲಾಗಿದ್ದಾರೆ ಎಂದು ಆರೋಗ್ಯ ಇಲಾಖೆ ಮೂಲಗಳು ಶನಿವಾರ ತಿಳಿಸಿವೆ. "ವೈರಾಲಜಿ  ಇನ್ಸ್‌ಸ್ಟಿಸ್ಯೂಟ್‌ಗೆ ಕಳುಹಿಸಲಾದ 285 ರಕ್ತದ ಮಾದರಿಗಳಲ್ಲಿ, 261 ಫಲಿತಾಂಶಗಳು ನೆಗೆಟೆವ್‌ ಎಂದು ಕಂಡುಬಂದಿದೆ. ಇತರರ ವರದಿಗಳಿಗಾಗಿ ನಾವು  ಕಾಯುತ್ತಿದ್ದೇವೆ" ಎಂದು ಮೂಲಗಳು ತಿಳಿಸಿವೆ.ಚೀನಾದ ವುಹಾನ್‌ನಿಂದ ಆಗಮಿಸಿದ 72 ಜನರಲ್ಲಿ 67 ಜನರು ನೆಗೆಟಿವ್‌ ವರದಿ ಬಂದಿದೆ ಎಂದು ಅದು ಹೇಳಿದೆ. ಈ ಮಧ್ಯೆ, ಆರೋಗ್ಯ ಸಚಿವ ಕೆ.ಕೆ.ಶೈಲಜಾ ಶುಕ್ರವಾರ ರಾಜ್ಯದಲ್ಲಿ ಯಾವುದೇ ಸಕಾರಾತ್ಮಕ ಪ್ರಕರಣಗಳು ಕಂಡು ಬಂದಿಲ್ಲದ ಕಾರಣ ಈ ಹಿಂದೆ ಘೋಷಿಷಲಾಗಿದ್ದ ಆರೋಗ್ಯ ವಿಪತ್ತು  ಘೋಷಣೆಯನ್ನು ಹಿಂಪಡೆದುಕೊಳ್ಳಲಾಗಿದೆ  ಎಂದು ಹೇಳಿದರು. ಇದಕ್ಕೂ ಮೊದಲು, ಕೊರೊನಾವೈರಸ್ ಭೀತಿ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಇದನ್ನು ಫೆಬ್ರವರಿ 3 ರಂದು 'ರಾಜ್ಯ ವಿಪತ್ತು' ಎಂದು ಘೋಷಿಸಿತ್ತು.