ಕೊರೋನಾ ವೈರಸ್: ರಾಜ್ಯದಲ್ಲಿ ಆತಂಕದ ಪರಿಸ್ಥಿತಿ ಇಲ್ಲ - ಶ್ರೀರಾಮುಲು

ಬೆಳಗಾವಿ, ಮಾ 21, ಮಹಾರಾಷ್ಟ್ರ ರಾಜ್ಯದೊಂದಿಗೆ ಹೊಂದಿಕೊಂಡಿರುವ ಕಾರಣ ಗಡಿ ಜಿಲ್ಲೆ ಬೆಳಗಾವಿಯಲ್ಲಿ ಶೀಘ್ರದಲ್ಲಿಯೇ ಕೊರೋನಾ ಸೊಂಕಿಗೆ ಸಂಬಂಧಿಸಿದ ಗಂಟಲು ದ್ರವ ಪರೀಕ್ಷೆಗಾಗಿ ಪ್ರಯೋಗಾಲಯವನ್ನು ಶೀಘ್ರದಲ್ಲಿಯೇ ಆರಂಭಿಸುವುದಾಗಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಶ್ರೀರಾಮಲು ಭರವಸೆ ನೀಡಿದ್ದಾರೆಬೆಳಗಾವಿ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಸಭೆ ನಡೆಸುವ ಮುನ್ನ ಸುದ್ದಿಗಾರರ ಜತೆ ಮಾತನಾಡಿದ  ಅವರು, ಕರ್ನಾಟಕದಲ್ಲಿ ಇವತ್ತಿನವರೆಗೆ 16 ಕೊರೋನಾ ಸೊಂಕಿನ ಪ್ರಕರಣಗಳು ಪತ್ತೆಯಾಗಿದ್ದವು, ಇವರಲ್ಲಿ ಐವರು ಗುಣಮುಖರಾಗಿದ್ದಾರೆ, ಈ ಪೈಕಿ ಮೂವರು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ ಎಂದರು.  ರಾಜ್ಯದಲ್ಲಿ ಆತಂಕ ಪಡುವ ಪರಿಸ್ಥಿತಿ ಇಲ್ಲ. ಸರ್ಕಾರ ಎಲ್ಲ ರೀತಿಯ ಕ್ರಮಗಳನ್ನು ಕೈಗೊಂಡಿದೆ. ಜನತೆ ಮುನ್ನೆಚ್ಚರಿಕೆಗೆ ಆದ್ಯತೆ ನೀಡಬೇಕು. ಸ್ವಚ್ಛತೆಗೆ ಒತ್ತು ಕೊಡಬೇಕು ಎಂದರು. ವೈದ್ಯಕೀಯ ಶಿಕ್ಷಣ ಸಚಿವ ಡಾ. ಸುಧಾಕರ್ ಮತ್ತು ತಾವು ಸೇರಿ ರಾಜ್ಯದ ಆಗು ಹೋಗುಗಳ ಮೇಲೆ ನಿರಂತರವಾಗಿ,ನಿಗಾ ಇಟ್ಟಿದ್ದೇವೆ. ರಾಜ್ಯದಲ್ಲಿ ಈಗಾಗಲೆ ಒಂದುವರೆ ಲಕ್ಷ ಜನರನ್ನು ಪರೀಕ್ಷೆಗೊಳಪಡಿಸಿದ್ದೇವೆ. ಕೊರೋನಾ ,ಸೊಂಕು ,ಶಂಕಿತರಿಗೆ ಮನೆಯಲ್ಲಿಯೇ ಉಪಚಾರ ನೀಡಲಾಗುತ್ತಿದೆ. ಇವರ ಮೇಲೆ ನಿಗಾ ಇಡಲು ಹೋಮ್ ಗಾರ್ಡ್ ಗಳನ್ನು ನಿಯೋಜನೆ ಮಾಡಲು ಚಿಂತನೆ ನಡೆಸಿದ್ದೇವೆ .ಎಂದು ಶ್ರೀರಾಮಲು ಹೇಳಿದರು.ಸಚಿವರು ಜಿಲ್ಲಾಧಿಕಾರಿಗಳ ಕಚೇರಿ ಪ್ರವೇಶ ಮಾಡುವಾಗ,ಆರೋಗ್ಯ ಸಚಿವರಿಗೂ ಸ್ಕ್ರೀನಿಂಗ್ ಮಾಡಲಾಯಿತು.