ಕರೋನ ಸಂಕಷ್ಟ: ದೆಹಲಿ ಸರ್ಕಾರದಿಂದ ಖಡಕ್ ಆದೇಶ ..!!

ನವದೆಹಲಿ, ಜೂನ್ 4, ಕೊರೊನಾ  ಸೋಂಕು  ಹತೋಟಿಗೆ ತರಲು  ಬಸ್, ರೈಲು ಮತ್ತು ವಿಮಾನದಲ್ಲಿ ದೆಹಲಿಗೆ ಬರುವವರೆಲ್ಲರಿಗೂ  ಒಂದು ವಾರದ ಹೋಂ ಕ್ವಾರಂಟೈನ್ ಕಡ್ಡಾಯಗೊಳಿಸಿ ರಾಜ್ಯ ಸರ್ಕಾರ ಕಟ್ಟುನಿಟ್ಟಿನ ಆದೇಶ ಹೊರಡಿಸಿದೆ. ಪ್ರಸ್ತುತ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 23,645,ಏರಿಕೆಯಾಗಿದ್ದು  ಇದುವರೆಗೂ 615 ಜನರು ಸಾವನ್ನಪ್ಪಿದ್ದಾರೆ.ಬಸ್, ರೈಲು ಮತ್ತು ವಿಮಾನದಲ್ಲಿ ದೆಹಲಿಗೆ ಬರುವ ಎಲ್ಲರೂ   ಒಂದು ವಾರದ ಹೋಂ ಕ್ವಾರಂಟೈನ್ ಕಡ್ಡಾಯಗೊಳಿಸಿದ್ದು, ಇದನ್ನು ಕಟ್ಟುನಿಟ್ಟಾಗಿ ಜಾರಿಗೆ ತರುವಂತೆ  ಜಿಲ್ಲಾಡಳಿತಕ್ಕೆ ಸೂಚಿಸಲಾಗಿದೆ. ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ಕಳೆದ ಒಂದು ವಾರದಿಂದ ಪ್ರತಿದಿನ 1200 ಕ್ಕು ಹೆಚ್ಚು ಹೊಸ ಪ್ರಕರಣಗಳು  ದಾಖಲಾಗುತ್ತಿರುವುದೇ ಹೊಸ ನಿಯಮ ಜಾರಿಗೆ ಕಾರಣ ಎನ್ನಲಾಗಿದೆ. ವಾರದ ಬಳಿಕ  ಪರಿಸ್ಥಿತಿ ಅವಲೋಕಿಸಿ  ಗಡಿಯನ್ನು ಮುಕ್ತಗೊಳಿಸುವ ಬಗ್ಗೆ ಮುಂದಿನ ಕ್ರಮ ಕೈಗೊಳ್ಳವುದಾಗಿ   ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ.