ಪಣಜಿ, ಮೇ 18, ಗೋವಾ ರಾಜ್ಯಕ್ಕೆ ಪ್ರವೇಶಿಸುವ ಎಲ್ಲ ವ್ಯಕ್ತಿಗಳನ್ನು ಕರೋನ ಸೋಂಕು ಪತ್ತೆ ಪರೀಕ್ಷೆಗೆ ಒಳಪಡಿಸಲಾಗುತ್ತಿದೆ ಹೀಗಾಗಿ ಸಮುದಾಯ ಪ್ರಸರಣಕ್ಕೆ ಅವಕಾಶವಿಲ್ಲ ಎಂದು ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಹೇಳಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಅವರು, ಸದ್ಯ ರಾಜ್ಯದಲ್ಲಿ ಕರೋನ ಸೋಂಕು ಪೀಡಿತರ ಕೇವಲ 22 ಸೀಮಿತವಾಗಿದೆ ರಾಜ್ಯಕ್ಕೆ ಪ್ರವೇಶಿಸುವ ಎಲ್ಲ ವ್ಯಕ್ತಿಗಳನ್ನು ಪರೀಕ್ಷೆ ಮಾಡುತ್ತಿರುವ ದೇಶದ ಏಕೈಕ ರಾಜ್ಯ ಗೋವಾವಾಗಿದೆ ಎಂದು ಹೇಳಿಕೊಂಡಿದ್ದಾರೆ. ರಾಜ್ಯದ ತೆಗೆದುಕೊಂಡ ಇಂತಹ ಮುನ್ನೆಚ್ಚರಿಕೆ ಕ್ರಮವಾಗಿ , ಸಮುದಾಯ ಪ್ರಸರಣಕ್ಕೆ ಅವಕಾಶವಿಲ್ಲದಂತಾಗಿದೆ ಮೇಲಾಗಿ ಸೋಂಕು ಪ್ರಕರಣಗಳನ್ನು ಪ್ರವೇಶದ ಸ್ಥಳದಲ್ಲಿಯೇ ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದೇವೆ. ಈ ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡುವ ಕಾರ್ಯತಂತ್ರದೊಂದಿಗೆ ನಾವು ಸದಾ ಜಾಗರೂಕರಾಗಿರುವುದರಿಂದಲೇ ಹೆಚ್ಚಿನ ಪ್ರಕರಣಗಳು ವರದಿಯಾಗಿಲ್ಲ ಎಂದು ಅವರು ಹೇಳಿದ್ದಾರೆ.