ಶಿವಮೊಗ್ಗ, ಮೇ 10, ಹಸಿರು ವಲಯ ಶಿವಮೊಗ್ಗಕ್ಕೂ ಕೊರೊನಾ ಪ್ರವೇಶ ಪಡೆದಿದ್ದು ಎಂಟು ಜನರಲ್ಲಿ ಕೊರೊನಾ ಸೋಂಕು ದೃಢಪಟ್ಟಿದೆ. ಗುಜರಾತ್ ನ ಅಹಮದಾಬಾದ್ ನಿಂದ ಬಂದಿದ್ದ 9 ಜನರ ಪೈಕಿ 8 ಜನರಲ್ಲಿ ಸೋಂಕು ಧೃಡಪಟ್ಟಿದೆ.ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ಮಾತನಾಡಿ, ಜಿಲ್ಲೆಗೆ 284 ಜನ ಹೊರ ರಾಜ್ಯದಿಂದ ಆಗಮಿಸಿದ್ದರು. ಅವರೆಲ್ಲರನ್ನೂ ಕ್ವಾರಂಟೈನ್ ಮಾಡಲಾಗಿದೆ. ಪಾಸಿಟಿವ್ ಬಂದ 8 ಜನರನ್ನು ಪ್ರತ್ಯೇಕ ವಾಗಿರಿಸಿ ಚಿಕಿತ್ಸೆ ನೀಡಲಾಗುತ್ತಿದೆ.ಜನರು ಆತಂಕಪಡುವ ಅಗತ್ಯವಿಲ್ಲ. ಜಿಲ್ಲಾಡಳಿತದ ಜತೆ ಜನರು ಸಹಕಾರ ನೀಡಲು ಈಶ್ವರಪ್ಪ ಮನವಿ ಮಾಡಿದ್ದಾರೆ.