ಬೆಳಗಾವಿ, ಮೇ 26,ಬೆಳಗಾವಿ ಜಿಲ್ಲೆಯಲ್ಲಿ ಮತ್ತೆ 13 ಕೊರೊನಾ ಕೇಸ್ ಬಂದಿದೆಯಾದರೂ ಜಿಲ್ಲೆಯಲ್ಲಿ ಕೊರೊನಾ ಸೋಂಕು ನಿಯಂತ್ರಣದಲ್ಲಿದೆ. ಸಮುದಾಯದಲ್ಲಿ ಸೋಂಕು ಹರಡಿಲ್ಲ ಎಂದು ಉಸ್ತುವಾರಿ ಸಚಿವ ಜಗದೀಶ್ ಶೆಟ್ಟರ್ ಸ್ಪಷ್ಟಪಡಿಸಿದ್ದಾರೆ.ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗಾಗಲೇ 93 ಸೋಂಕಿತರು ಗುಣಮುಖರಾಗಿದ್ದಾರೆ.
ಕುಡಚಿ, ಹಿರೇಬಾಗೇವಾಡಿ ಅಲ್ಲಿ ಬಹಳಷ್ಟು ಜನರು ಗುಣಮುಖರಾಗಿದ್ದಾರೆ. ಮಂಗಳವಾರ ಜಾರ್ಖಂಡ್‌ನಿಂದ ಬಂದ 13 ಜನರಲ್ಲಿ ಕೇಸ್ ಪತ್ತೆಯಾಗಿದೆ. 5950 ಜನರು ಹೊರ ರಾಜ್ಯದಿಂದ ಬಂದಿದ್ದಾರೆ. 4323 ಮಹಾರಾಷ್ಟ್ರ ದಿಂದ ಬಂದಿದ್ದಾರೆ. ಮಹಾರಾಷ್ಟ್ರ ದಿಂದ ಬಂದ 2 ಸಾವಿರ ಜನರ ಗಂಟಲು ದ್ರವ ಲ್ಯಾಬ್‌ಗೆ ಕಳುಹಿಸಲಾಗಿದೆ. ಅದರಲ್ಲಿ 1 ಸಾವಿರ ಜನರ ವರದಿ ಬಂದಿದೆ. ಇದರಲ್ಲಿ ಬರೀ 4 ರಿಂದ 5 ಜನರಿಗೆ ಪಾಸಿಟಿವ್ ಬಂದಿದೆ. ಹೊರ ರಾಜ್ಯದಿಂದ ಬಂದವರಿಂದ ಹೆದರುವ ಅಗತ್ಯವಿಲ್ಲ ಎಂದರು.
ಖಾಸಗಿ ಆಸ್ಪತ್ರೆಯವರು ಕೋವಿಡ್ ಅನ್ನು ಸವಾಲಾಗಿ ತೆಗೆದುಕೊಳ್ಳಲಿಲ್ಲ. ಖಾಸಗಿ ಆಸ್ಪತ್ರೆಯವರು ಒಪಿಡಿ ಆರಂಭ ಮಾಡಲಿಲ್ಲ. ಯುದ್ಧದ ಸಮಯದಲ್ಲಿ ಖಾಸಗಿ ಆಸ್ಪತ್ರೆಯವರು ಹೊರಗೆ ಬರಲಿಲ್ಲ. ಉಳಿದ ಸಂದರ್ಭದಲ್ಲಿ ಖಾಸಗಿ ಆಸ್ಪತ್ರೆ ತೆಗೆಯುತ್ತಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.ಪಾಲಿಕೆಯಿಂದ ಮೂರು ವರ್ಷಕ್ಕೂ ತೆರಿಗೆ ಹೆಚ್ಚಳ ಮಾಡಬಾರದೆಂದು ಮನವಿ ಬಂದಿದೆ. ತೆರಿಗೆ ಹೆಚ್ಚಿಸುವ ಬಗ್ಗೆ ಸರ್ಕಾರ ನಿಯಮ ನಿರ್ಧಾರ ಮಾಡಲಿದೆ. ಈಗ ಜನರು ತೆರಿಗೆ ಭರಿಸಲಿ.
ಮಹಾರಾಷ್ಟ್ರ, ರಾಜಸ್ತಾನ, ಗುಜರಾತ್‌ನಿಂದ ಬರುವವರಿಗೆ ಅವಕಾಶವಿಲ್ಲ. ರೆಡ್ ಝೋನ್ ರಾಜ್ಯದಿಂದ ಬರುವವರಿಗೆ ನಿರ್ಬಂಧ ವಿಧಿಸಿದ್ದೇವೆ. ಮೊದಲು ರೆಡ್ ಝೋನ್ ದಿಂದ ಬರಲು ಅವಕಾಶ ಕೊಟ್ಟಿದ್ದೇವೆ. ಆದರೆ ಈಗ ಮತ್ತೆ ಅವರಿಗೆ ರಾಜ್ಯಕ್ಕೆ ಅವಕಾಶ ಕೊಡಬೇಕು ಅನ್ನು ಒತ್ತಾಯಗಳು ಬರುತ್ತಿವೆ. ಈ ಬಗ್ಗೆ ಮುಂದಿನ ಕ್ಯಾಬಿನೆಟ್ ಸಭೆಯಲ್ಲಿ ಚರ್ಚೆ ಮಾಡಿ ತೀರ್ಮಾನ ಮಾಡುತ್ತೇವೆ. ಕ್ಯಾಬಿನೆಟ್ ಸಭೆಗೂ ಮುನ್ನವೇ ಮುಖ್ಯಮಂತ್ರಿಗಳು ಹಾಗೂ ಆರೋಗ್ಯ ಸಚಿವರು ಜೊತೆಗೆ ಚರ್ಚೆ ಮಾಡಲಾಗುವುದು ಎಂದರು.850 ಜನ ಉತ್ತರ ಪ್ರದೇಶ ಕಾರ್ಮಿಕರ ಪರದಾಟ ವಿಚಾರವಾಗಿ ಪ್ರತಿಕ್ರಿಯಿಸಿದ ಶೆಟ್ಟರ್, ನೋಡಲ್ ಅಧಿಕಾರಿಗಳು ಮಾಹಿತಿ ನೀಡಿದರೆ ಬರೀ ಎರಡು ಗಂಟೆಯಲ್ಲಿ ರೈಲಿನ ವ್ಯವಸ್ಥೆ ಮಾಡುತ್ತೇವೆ. ಅದಕ್ಕೂ ಮೊದಕು ಎರಡು ರಾಜ್ಯಗಳ ಮಧ್ಯೆ ಸಮನ್ವಯದ ನಿರ್ಧಾರ ಆಗಬೇಕು ಎಂದು ಶೆಟ್ಟರ್ ಹೇಳಿದರು.