ಲೋಕದರ್ಶನವರದಿ
ರಾಣೇಬೆನ್ನೂರು-ಎ.8: ಕರೋನಾ ವೈರಸ್ ಸೊಂಕು ರೋಗ ನಿವಾರಿಸಲು ಇದಕ್ಕೆ ಯಾವುದೇ ಅಧಿಕೃತ ಲಸಿಕೆ ಲಭ್ಯವಿಲ್ಲ. ಆರಂಭದಲ್ಲಿ ಜ್ವರ, ತಲೆನೂವು, ನೆಗಡಿ, ಕೆಮ್ಮು ನಂತರ ಉಸಿರಾಟದ ತೊಂದರೆ ಕಾಣಿಸುತ್ತದೆ. ನಿಮೋನಿಯಾ ಸಂದರ್ಭದಲ್ಲಿ ಅವರನ್ನು ವೆಂಟಿಲೇಟರ್ನಲ್ಲಿ ಇಟ್ಟು ಚಿಕಿತ್ಸೆ ನೀಡಬೇಕಾಗುತ್ತದೆ. ಅದಕ್ಕಾಗಿ ಜಿಲ್ಲೆಯಲ್ಲಿ ಸದ್ಯ 7 ಲಭ್ಯವಿದ್ದು, ಮುಂಜಾಗೃತಕ್ರಮವಾಗಿ 20 ವೆಂಟಿಲೇಟರ್ಗಳ ಬೇಡಿಕೆ ಇಡಲಾಗಿದೆ ಎಂದು ಜಿಲ್ಲಾ ಪಂಚಾಯತ್ ಮುಖ್ಯಕಾರ್ಯನಿವರ್ಾಹಕ ಅಧಿಕಾರಿ ರಮೇಶ್ ದೇಸಾಯಿ ಹೇಳಿದರು.
ಬುಧವಾರ ನಗರದ ತಾಲೂಕ ಪಂಚಾಯತ್ ಸಭಾಭವನದಲ್ಲಿ ಜಿಲ್ಲೆಯಲ್ಲಿ ಸದ್ಯದ ಕೊರೊನಾ ವಾಸ್ತವಿಕ ಪರಿಸ್ಥಿತಿ ಕುರಿತಂತೆ ವಿವರಿಸಿ ಮಾತನಾಡಿದರು. ಟಾಸ್ಕ್ ಪೋಸರ್್ ಜಿಲ್ಲಾಸಮಿತಿಯು ಈ ಮೊದಲು ಬೆಳಿಗ್ಗೆ 7ರಿಂದ 10ರವರೆಗೆ ಅಗತ್ಯವಸ್ತು, ತರಕಾರಿ ಸಾಮಗ್ರಿಗಳನ್ನು ಖರೀದಿಗೆ ಅವಕಾಶ ನೀಡಿಲಾಗಿತ್ತು. ಅದೇ ರೀತಿ ಮುಂದುವರೆದಿದೆ. ಜಿಲ್ಲೆಯ ಜನತೆ ಸಕರ್ಾರದ ಆದೇಶವನ್ನು ಪರಿಪಾಲಿಸುವಲ್ಲಿ ಅಸಹಕಾರ ತೋರಿಸುತ್ತಿರುವುದು ಕಂಡು ಬರುತ್ತಿದೆ. ಇದರಿಂದ ಲಾಕ್ಡೌನ್ ಮುಂದುವರೆಯುವ ಎಲ್ಲಾ ಸಾಧ್ಯತೆಗಳಿವೆ ಎಂದರು.
ಜಿಲ್ಲೆಯಲ್ಲಿ 11 ಸಾವಿರದಷ್ಟು ಕಾಮರ್ಿಕರನ್ನು ಗುರುತಿಸಲಾಗಿದೆ. ಅವರಿಗೆ ಈಗಾಗಲೇ ತಪಾಸಣೆಗೊಳಪಡಿಸಲಾಗಿದೆ. ಯುದ್ದೋಪಾದಿಯಲ್ಲಿ ಸಾಗಿರುವ ಕೆಲಸದಲ್ಲಿ ಅಂಗನವಾಡಿ, ಆಶಾಕಾರ್ಯಕರ್ತರು ಪ್ರತಿಯೊಂದು ಗ್ರಾಮಾಂತರ ಪ್ರದೇಶಗಳಲ್ಲಿ ಸಕರ್ಾರದ ಆದೇಶದನ್ವಯ ತಮ್ಮ-ತಮ್ಮ ಕೆಲಸವನ್ನು ಮಾಡುತ್ತಿದ್ದಾರೆ. ನಾಗರೀಕರು ಅವರು ಬಂದಾಗ ಸಹಕಾರ ನೀಡಬೇಕು. ಜಿಲ್ಲೆಯ ಎಲ್ಲಾ ತಾಲೂಕಾ ಕೇಂದ್ರಗಳಲ್ಲಿ ಫೀವರ್ ಕ್ಲಿನಿಕ್ ಕೇಂದ್ರಗಳನ್ನು ತೆರೆಯಲು ನಿರ್ಧರಿಸಲಾಗಿದೆ. ಈ ಕುರಿತು ಜಿಲ್ಲಾಧಿಕಾರಿಗಳು ಜಾರಿಗೆ ತರಲಿದ್ದಾರೆ.
ಜಿಲ್ಲೆಯಲ್ಲಿ ಕೋರೊನಾ ಶಂಕಿತ ಯಾವುದೇ ಪ್ರಕರಣಗಳು ದಾಖಲಾಗಿಲ್ಲ. ಆರಂಭಿಕ ಹಂತದಲ್ಲಿ ಕೆಲವರನ್ನು ಪರೀಕ್ಷೆಗೊಳಪಡಿಸಲಾಗಿದ್ದು, ನಂತರ ಯಾವುದೇ, ಪಾಸಿಟಿವ್ ಬಂದಿಲ್ಲ.
ಯಾವುದೇ ಸಂದರ್ಭ ಬಂದರೂ ಜಿಲ್ಲೆಯಲ್ಲಿ ಪರಿಸ್ಥಿತಿಯನ್ನು ಎದುರಿಸಲು ಜಿಲ್ಲಾಡಳಿತ ಸದಾ ಸಿದ್ಧವಾಗಿದೆ. ದವಸ-ಧಾನ್ಯಗಳ ಕೊರತೆಯಿಲ್ಲ. ಆದರೆ ಚಿಗ್ರಾಹಕರು ನಾಮುಂದು-ತಾಮುಂದ ಎನ್ನುತ್ತಾ ಅಂತರವನ್ನು ಕಾಯ್ದುಕೊಳ್ಳುವಲ್ಲಿ ವಿಫಲರಾಗುತ್ತಿದ್ದಾರೆ. ಸಾರ್ವಜನಿಕರು ಅಂತರವನ್ನು ಕಾಯ್ದುಕೊಂಡು ಖರೀದಿಮಾಡಿಕೊಳ್ಳಬೇಕು ಎಂದರು.
ಅಂತರಾಜ್ಯ ವ್ಯಾಪ್ತಿಯಿಂದ ಬಂದಿರುವ ಕೂಲಿ ಕಾಮರ್ಿಕರು ಕಟ್ಟಡ ಕಾಮರ್ಿಕರು ಬಿದಿ-ಬದಿ ವಾಸಿಸುವರು ಸೇರಿದಂತೆ ಪಿಬಿಎಲ್, ಅಂತ್ಯೋದಯ ಚೀಟಿ ಹೊಂದಿದವರಿಗೆ ತಲಾ 10ಕೆ.ಜಿ. ಅಕ್ಕಿಯಂತೆ ಕುಟುಂಬದಲ್ಲಿ ಇರುವಷ್ಟು ಜನರಿಗೆ ಅಕ್ಕಿ ವಿತರಿಸಲಾಗುತ್ತಿದೆ.
ಇದಕ್ಕೆ ಯಾವುದೇ ಹಣ ಕೊಡಬೇಕಾಗಿಲ್ಲ ಇದೆಲ್ಲವೂ ಉಚಿತವಾಗಿದೆ. ಕೆಲವು ಕಡೆ ಹಣ ಪಡೆಯುತ್ತಿರುವ ದೂರುಗಳು ಸಹ ಕೇಳಿ ಬಂದಿವೆ. ಅಂತಹ ಪಡಿತರ ನ್ಯಾಯಬೆಲೆ ಅಂಗಡಿಗಳ ಪರವಾನಿಗೆಯನ್ನು ರದ್ದುಪಡಿಸಲಾಗುವುದು ಎಂದರು.
ಕೇಂದ್ರ ಸಕರ್ಾರವು ಈಗಾಗಲೇ ಕೂಲಿ ಮತ್ತು ಕಟ್ಟಡ ಕಾಮರ್ಿಕರಿಗೆ 1 ಸಾವಿರ ರೂ.ಗಳ ಹಣ ಅವರ ಖಾತೆಗೆ ಜಮೆಯಾಗಿದೆ. ಅದೇ ರೀತಿ ಹೆಚ್ಚುವರಿಯಾಗಿ ಮತ್ತೊಂದು ಸಾವಿರ ರೂ.ಸೇರಿ ಒಟ್ಟು 2 ಸಾವಿರ ಜಮೆಯಾಗಲಿದೆ. ಜಿಲ್ಲೆಯಲ್ಲಿ ಯಾವುದೇ ಭೀಕರತೆಯ ಸೊಂಕು ಪರಿಣಾಮಗಳು ಇರದೇ ಇರುವುದು ಎಲ್ಲ ನಾಗರೀಕರ ಅದೃಷ್ಠವೆಂದು ಭಾವಿಸಬೇಕಾಗಿದೆ.
ಇದನ್ನು ಸೊಂಕು ಹರಡದಂತೆ ತಡೆಯಲು ಸ್ವಯಂ ಗೃಹಬಂಧನ ವಿಧಿಸಿಕೊಳ್ಳುವುದೇ ದಿವ್ಯ ಔಷಧಿಯಾಗಿದೆ ಎಂದ ಅವರು ರಾಣೇಬೆನ್ನೂರು ಮಾರುಕಟ್ಟೆ ದೊಡ್ಡದಿದೆ. ಇಲ್ಲಿನ ಶಾಸಕರು ಸ್ಥಳೀಯ ಪರಿಸ್ಥಿತಿಗನುಗುಣವಾಗಿ ಕ್ರೀಯಾ ಯೋಜನೆಗಳನ್ನು ರೂಪಿಸಬೇಕಾಗುತ್ತದೆ ಇದಕ್ಕೆ ಎಲ್ಲರೂ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.
ಕೃಷಿ ಉತ್ಪನ್ನಗಳನ್ನು ಸರಬರಾಜು ಮಾಡಲು ಈಗಾಗಲೇ ಕೃಷಿ ಸಚಿವರಾದ ಬಿ.ಸಿ.ಪಾಟೀಲ ಅವರು ಜಿಲ್ಲಾ ಕೇಂದ್ರದಲ್ಲಿ ನಡೆದ ಮಹತ್ವದ ಸಭೆಯಲ್ಲಿ ಸರಳೀಕರಣಗೊಳಿಸಲು ತೀಮರ್ಾನಿಸಿದ್ದಾರೆ.
ಬೀಜ-ಗೊಬ್ಬರ ಮತ್ತಿತರ ಕೃಷಿ ಚಟುವಟಿಕೆಗಳಿಗೆ ಬೇಕಾಗುವ ಪರಿಕರಗಳನ್ನು ಮುಕ್ತವಾಗಿ ಪಡೆಯಬಹುದಾಗಿದೆ. ವ್ಯಾಪಾರಸ್ಥರು ತಮ್ಮ ದಿನನಿತ್ಯದ ಕಾಯಕವನ್ನು ನಿಗದಿತ ಅವಧಿಯಲ್ಲಿ ಅಂತರವನ್ನು ಕಾಯ್ದುಕೊಂಡು ಸಾಗಬೇಕು. ಇದರಿಂದ ಯಾರಿಗೂ ತೊಂದರೆಯಾಗಲಾರದು ಎಂದರು.ಈ ಸಂದರ್ಭದಲ್ಲಿ ಶಾಸಕ ಅರುಣಕುಮಾರ ಪೂಜಾರ, ತಾಪಂ ಕಾರ್ಯನಿವರ್ಾಹಕ ಅಧಿಕಾರಿ ಡಾ|| ಎಸ್.ಎಂ.ಕಾಂಬಳೆ, ತಾಪಂ ಅಧ್ಯಕ್ಷೆ ಗೀತಾ ವಸಂತ ಲಮಾಣಿ, ಉಪಾಧ್ಯಕ್ಷೆ ಕಸ್ತೂರವ್ವ ಹೊನ್ನಾಳಿ, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಚೋಳಪ್ಪ ಕಸವಾಳ, ವ್ಯವಸ್ಥಾಪಕ ಬಸವರಾಜ ಶಿಡೇನೂರ ಸೇರಿದಂತೆ ಮತ್ತಿತರರ ಅಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು.