ಜಮಖಂಡಿ 05: ವಿದ್ಯುತ್ ತಂತಿ ತಗುಲಿ ಯುವಕ ಓರ್ವನು ಸ್ಥಳದಲ್ಲಿಯೇ ಸಾವನ್ನಪ್ಪಿದ ಘಟನೆ ನಡೆದಿದೆ.
ತಾಲ್ಲೂಕಿನ ಬಿದರಿ ಗ್ರಾಮದ ರಾಜು ಪರಸಪ್ಪ ಕಂಕನವಾಡಿ (21) ಕೃಷ್ಣಾ ನದಿ ತೀರದ ದಡದಲ್ಲಿ ಸ್ಟಾರ್ಟರ್ ಡಬ್ಬಿಯನ್ನು ನದಿಯ ದಡದಲ್ಲಿ ಇಡುವ ಸಮಯದಲ್ಲಿ ಕಟ್ಟಾದ ವಿದ್ಯುತ್ ತಂತಿ ತಗುಲಿ ಸ್ಥಳದಲ್ಲಿಯೇ ಸಾವನ್ನಪ್ಪಿದ ದುರ್ದೈವಿ.
ಪರಸಪ್ಪ ಶಿವಪ್ಪ ಕಂಕನವಾಡಿ ಅವರ ಇಬ್ಬರು ಮಕ್ಕಳೊಂದಿಗೆ ಕೃಷ್ಣಾ ನದಿಯ ಬಳಿ ಮೋಟರ್ ಡಬ್ಬಿಯನ್ನು ನದಿಯ ದಡಕ್ಕೆ ಎತ್ತಿ ಇಡಲು ಹೋದ ಸಮಯದಲ್ಲಿ ಸ್ಟಾರ್ಟರ್ ಡಬ್ಬಿಯ ವಿದ್ಯುತ್ ವಾಯರ್ ಕಟಾಗಿದ ಪರಿಣಾಮ ಹಿರಿಯ ಮಗನಾದ ರಾಜು ಕಂಕನವಾಡಿ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾನೆ.
ಕಿರಿಯ ಮಗನಾದ ಮನೋಜ ಪರಸಪ್ಪ ಕಂಕನವಾಡಿ ಈತನಿಗೆ ಗಾಯವಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು. ಸಾವಳಗಿ ಪೋಲಿಸ್ ಠಾಣೆಯ ಪಿಎಸ್ಐ ಶಿವಾನಂದ ಶಿಂಗನ್ನವರ ಹಾಗೂ ಸಿಬ್ಬಂದಿಗಳು ಭೇಟಿ ನೀಡಿ ತನಿಖೆಯನ್ನು ಮುಂದುವರಿಸಿದ್ದಾರೆ.