ಮೈಲಾರಲಿಂಗೇಶ್ವರ ಜಾತ್ರೆ ಗೆ ಹಾಲು ಉಕ್ಕಿಸುವ ಮೂಲಕ ಚಾಲನೆ
ಹೂವಿನಹಡಗಲಿ 05: ತಾಲ್ಲೂಕಿನ ಮೈಲಾರದಲ್ಲಿ ಮಂಗಳವಾರ ರಥ ಸಪ್ತಮಿಯಂದು ಹಾಲು ಉಕ್ಕಿಸುವ ಸಾಂಪ್ರದಾಯಕ ಆಚರಣೆಯೊಂದಿಗೆ ಮಂಗಳವಾರ ಮ್ಯೆಲಾರಲಿಂಗೇಶ್ವರ ಸ್ವಾಮಿಯ ವಾರ್ಷಿಕ ಜಾತ್ರೆಗೆ ಚಾಲನೆ ನೀಡಲಾಯಿತು.
ಬೆಳಿಗ್ಗೆ ಮ್ಯೆಲಾರಲಿಂಗೇಶ್ವರ ಸ್ವಾಮಿಗೆ ವಿಶೇಷ ಪೂಜೆ ನೆರವೇರಿಸಿ ಕಂಕಣಧಾರಣೆ ಮಾಡಲಾಯಿತು. ವಂಶಪಾರಂಪರ್ಯ ಧರ್ಮಕರ್ತ ಗುರು ವೆಂಕಪ್ಪಯ್ಯ ಒಡೆಯರ್ ಅವರು ಕಾರಣಿಕದ ಗೊರವಯ್ಯ ರಾಮಣ್ಣ ಸೇರಿದಂತೆ ಎಲ್ಲ ಬಾಬುದಾರರಿಗೆ ಕಂಕಣಧಾರಣೆ ಮಾಡಿದರು. ಬಳಿಕ ದೇವಸ್ಥಾನದ ರಂಗಮಂಟಪದಲ್ಲಿ ಹಾಲು ಉಕ್ಕಿಸುವ ಕಾರ್ಯಕ್ರಮ ನೆರವೇರಿತು. ಈಶಾನ್ಯ ದಿಕ್ಕಿಗೆ ಹಾಲು ಉಕ್ಕಿ ಹರಿಯಿತು. ಈ ದಿಕ್ಕಿನಲ್ಲಿ ಮಳೆ.ಬೆಳೆ ಸಮೃದ್ದವಾಗಲಿದೆ ಎಂಬುದು ಭಕ್ತರ ನಂಬಿಕೆ. ಇದಕ್ಕೂ ಮುನ್ನ ಕ್ಷೇತ್ರದ ಹೆಗ್ಗುರುತು ಆಗಿರುವ ಕಾರಣಿಕದ ಬಿಲ್ಲಿಗೆ ಪೂಜೆ ನೆರವೇರಿಸಲಾಯಿತು.
ದೇವಸ್ಥಾನದ ದೇವಸ್ಥಾನದ ಅರ್ಚಕ ಪ್ರಮೋದ್ ಭಟ್ ಪೌರೋಹಿತ್ಯ ನೆರವೇರಿಸಿದರು. ದೇವಸ್ಥಾನ ಕಾರ್ಯನಿರ್ವಾಹಕ ಅಧಿಕಾರಿ ಹನುಮಂತಪ್ಪ.ಬಾಬುದಾರರು.ಗ್ರಾಮಸ್ಥರು ಇದ್ದರು.ದೇವಸ್ಥಾನದಲ್ಲಿ ರಥಸಪ್ತಮಿ ಆಚರಣೆಯ ಬಳಿಕ ಸ್ವಾಮಿಯ ಉತ್ಸವವು ಮೌನಸವಾರಿಯಲ್ಲಿ ಡೆಂಕನ ಮರಡಿಗೆ ತೆರಳಿತು. ಕಾರಣಿಕ ಜರುಗುವವರೆಗೆ ಸ್ವಾಮಿಯ ಉತ್ತವ ಮೂರ್ತಿಮರಡಿಯಲ್ಲೇ ಪ್ರತಿಷ್ಠಾಪನೆಗೊಳ್ಳಲಿದೆ. ದೇವಸ್ಥಾನದಲ್ಲಿ 11 ದಿನಗಳವರೆಗೆ ಪೂಜೆ ಹಾಗೂ ಗಂಟೆಯ ನಾದ ಮೊಳಗುವುದಿಲ್ಲ. ಫೆ. 14 ರಂದು ಕಾರಣಿಕ ನೆರವೇರುವವರೆಗೂ ಹರಕೆ ಹೊತ್ತ ಭಕ್ತರು ಹಗಲು-ರಾತ್ರಿ ಮಜ್ಜಿಗೆ, ಬೆಲ್ಲದ ಪಾನಕ ನೀಡುತ್ತರೆ.