ಕೊರೊನಾ ರೋಗಿಗಳನ್ನು ಪಶುಗಳಿಗಿಂತ ಹೀನವಾಗಿ ನೋಡಲಾಗುತ್ತಿದೆ; ಆಸ್ಪತ್ರೆಗಳ ವಿರುದ್ದ ಸುಪ್ರೀಂ ಸಿಡಿಮಿಡಿ

ನವದೆಹಲಿ, ಜೂನ್ ೧೨, ಕೊರೊನಾ ರೋಗಿಗಳಿಗೆ ಕಲ್ಪಿಸಲಾಗುತ್ತಿರುವ  ಚಿಕಿತ್ಸೆ, ಅವರ ಮೃತದೇಹಗಳಿಗೆ  ನಡೆಸಲಾಗುತ್ತಿರುವ ಅಂತ್ಯಕ್ರಿಯೆ ವಿದಾನದ ಬಗ್ಗೆ  ದೆಹಲಿ ಸರ್ಕಾರದ ವಿರುದ್ದ  ಸುಪ್ರೀಂಕೋರ್ಟ್  ಶುಕ್ರವಾರ  ಕೆಂಡಮಂಡಲವಾಗಿದೆ... ಗಂಭೀರ   ಅಭಿಪ್ರಾಯಗಳನ್ನು  ಹೊರಹಾಕಿದೆ.  ದೆಹಲಿಯ ಜೊತೆಗೆ ಮಹಾರಾಷ್ಟ್ರ, ಪಶ್ಚಿಮ ಬಂಗಾಳ, ತಮಿಳುನಾಡು ರಾಜ್ಯಗಳಲ್ಲೂ ಕೂಡಾ  ಕೋವಿಡ್   ಸೋಂಕಿತ ಆಸ್ಪತ್ರೆಗಳ  ನಿರ್ವಹಣೆ  ಯಾವರೀತಿಯಲ್ಲೂ  ಸರಿಯಿಲ್ಲ  ಬೇಸರ ವ್ಯಕ್ತಪಡಿಸಿದೆ.  ದೆಹಲಿಯಲ್ಲಿ ಕೊರೊನಾ ರೋಗಿಗಳನ್ನು ಪಶುಗಳಿಗಿಂತ ದಾರುಣವಾಗಿ ನಡೆಸಿಕೊಳ್ಳಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದೆ.ಆಸ್ಪತ್ರೆಗಳಲ್ಲಿ  ಕೋವಿಡ್  ಮೃತ  ದೇಹಗಳ ನಿರ್ವಹಣೆ  ಅತ್ಯಂತ  ಅಮಾನವೀಯವಾಗಿದೆ   ಎಂದು ಅತೃಪ್ತಿ  ವ್ಯಕ್ತಪಡಿಸಿದೆ.

ಕೊರೊನಾ  ಮೃತದೇಹಗಳ ಬಗ್ಗೆ   ಯಾವುದೇ  ಗೌರವ  ಇಲ್ಲ.  ಕನಿಷ್ಟಪಕ್ಷ    ಅವರ ಕುಟುಂಬದವರಿಗೂ  ಮಾಹಿತಿಯನ್ನೂ  ನೀಡುತ್ತಿಲ್ಲ. ಕೆಲವು  ಪ್ರಕರಣಗಳಲ್ಲಿ   ಅಂತಿಮ ಕ್ರಿಯೆಗಳಿಗೆ     ಕುಟುಂಬ ಸದಸ್ಯರು  ಪಾಲ್ಗೊಳ್ಳಲು ಸಾದ್ಯವಾಗುತ್ತಿಲ್ಲ ಎಂದು   ನೋವು ವ್ಯಕ್ತಪಡಿಸಿದೆ.   ಆಸ್ಪತ್ರೆಗಳಲ್ಲಿ ಮೃತ ದೇಹಗಳನ್ನು ಸಮರ್ಪಕವಾಗಿ ಇರಿಸಲು  ಸೂಕ್ತ ವ್ಯವಸ್ಥೆ  ಕೈಗೊಂಡಿಲ್ಲ ಎಂದು   ಆಕ್ರೋಶ  ಹೊರಹಾಕಿದೆ.ದೆಹಲಿಯಲ್ಲಿ ಕೊರೊನಾ ಪರೀಕ್ಷೆಗಳ ಸಂಖ್ಯೆ ಕಡಿಮೆಯಾಗಿರುವ  ಬಗ್ಗೆ  ಸುಪ್ರೀಂ ಕೋರ್ಟ್  ತೀವ್ರ  ಅತೃಪ್ತಿ ವ್ಯಕ್ತಪಡಿಸಿದೆ. ದೆಹಲಿಯಲ್ಲಿ  ಕೊರೊನಾ ಪರೀಕ್ಷೆ ಸಂಖ್ಯೆ  ೭೦೦೦ ನಿಂದ ೫೦೦೦ಕ್ಕೆ ಇಳಿಕೆಯಾಗಿದೆ. ಪರೀಕ್ಷೆಗಳನ್ನು ಏಕೆ ತಗ್ಗಿಸಲಾಗಿದೆ? ಎಂದು ಪ್ರಶ್ನಿಸಿದೆ.ಮೇ ತಿಂಗಳಿಗೆ  ಹೋಲಿಸಿದರೆ ಜೂನ್ ತಿಂಗಳಲ್ಲಿ ಕೊರೊನಾ ಪರೀಕ್ಷೆಗಳ ಸಂಖ್ಯೆ ತಗ್ಗಿದೆ. ದೆಹಲಿಯಲ್ಲಿ ಪರೀಕ್ಷೆಗಳನ್ನು  ಏಕೆ ಇಳಿಸಲಾಗಿದೆ ..?   ಉತ್ತರಿಸಿ ಎಂದು   ಸರ್ಕಾರವನ್ನು  ಸುಪ್ರೀಂ ಕೋರ್ಟ್  ತೀಕ್ಷ್ಣವಾಗಿ ಪ್ರಶ್ನಿಸಿದೆ. ಕೊರೊನಾ ವಿಷಯದಲ್ಲಿ ಕೇಂದ್ರ ಗೃಹ ಖಾತೆ  ಹೊರಡಿಸಿರುವ ಮಾರ್ಗಸೂಚಿಗಳನ್ನು ದೆಹಲಿ ಆಸ್ಪತ್ರೆಗಳು  ಕನಿಷ್ಠ ರೀತಿಯಲ್ಲೂ ಪಾಲಿಸುತ್ತಿಲ್ಲ ಎಂದು  ಅತ್ಯುನ್ನತ  ನ್ಯಾಯಸ್ಥಾನ  ಆಕ್ರೋಶ ವ್ಯಕ್ತಪಡಿಸಿದೆ.