ಕಲಬುರಗಿಯಲ್ಲಿ ಕೊರೊನಾಗೆ ಏಳನೇ ಬಲಿ

ಕಲಬುರಗಿ,  ಮೇ 13, ಸೂರ್ಯ ನಗರಿ ಕಲಬುರಗಿಯಲ್ಲಿ ಕೊರೊನಾ ಮರಣ ಮೃದಂಗ ಮುಂದುವರೆಸಿದ್ದು,  ಬುಧವಾರ ಜಿಲ್ಲೆಯಲ್ಲಿ ಸಾವಿನ ಸಂಖ್ಯೆ 7ಕ್ಕೆ ಏರಿಕೆ ಆಗಿದೆ.ಮೃತ 60 ವರ್ಷದ ವೃದ್ಧ ಸೇರಿ ಬುಧವಾರ ಕಲಬುರಗಿ ನಗರದಲ್ಲಿ ಇಬ್ಬರಲ್ಲಿ ಕೊರೊನಾ ಸೋಂಕು‌ ದೃಢವಾಗಿದೆ.ಕಲಬುರಗಿ  ನಗರದ ರೋಗಿ ಸಂಖ್ಯೆ-848 ಸಂಪರ್ಕದಲ್ಲಿ ಬಂದ ಖೂಬಾ‌ ಪ್ಲಾಟ್ ಪ್ರದೇಶದ 45 ವರ್ಷದ  ಪುರುಷ (ರೋಗಿ ಸಂಖ್ಯೆ-926) ಮತ್ತು ಮೋಮಿನಪುರ ಕಂಟೇನ್ ಮೆಂಟ್ ಝೋನ್ ಪ್ರದೇಶದ 60 ವರ್ಷದ  ವೃದ್ಧನಿಗೆ (ಮೃತ ರೋಗಿ ಸಂಖ್ಯೆ -927) ಕೊರೊನಾ ಸೋಂಕು ಕಂಡುಬಂದಿದೆ.ಮೋಮಿನಪುರ  ಕಂಟೇನ್ ಮೆಂಟ್ ಝೋನ್ ನಿವಾಸಿ 60 ವರ್ಷದ ವೃದ್ಧ ಮೇ 11 ರಂದೇ ಆಸ್ಪತ್ರೆಗೆ ಬರುವ  ಮುನ್ನವೇ ನಿಧನರಾಗಿದ್ದು, ಮರಣೋತ್ತರವಾಗಿ ಕೋವಿಡ್-19 ಪರೀಕ್ಷಿಸಲಾಗಿದ್ದು, ಇಂದು  ಕೋವಿಡ್ ದೃಢವಾಗಿದೆ.ಜಿಲ್ಲೆಯಲ್ಲಿ  ಕೊರೊನಾ‌ ಪೀಡಿತ 75 ರೋಗಿಗಳಲ್ಲಿ 7 ಜನ ನಿಧನ‌ರಾಗಿದ್ದು, 44 ರೋಗಿ ಗುಣಮುಖರಾಗಿ  ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ‌. ಉಳಿದಂತೆ 24 ರೋಗಿಗಳಿಗೆ ಚಿಕಿತ್ಸೆ‌  ಮುಂದುವರೆದಿದೆ.ದಿನದಿಂದ ದಿನಕ್ಕೆ ಜಿಲ್ಲೆಯಲ್ಲಿ ಸಾವಿನ ಸಂಖ್ಯೆ ಸೇರಿ ಸೋಂಕಿತರ ಸಂಖ್ಯೆಯೂ ಹೆಚ್ಚಾಗುತ್ತಿದ್ದು, ಮತ್ತಷ್ಟು ಆತಂಕಕ್ಕೆ ಎಡೆಮಾಡಿಕೊಟ್ಟಿದೆ.