ದೇಶದಲ್ಲಿ ಕೊರೊನಾ ಪ್ರಭಾವ; ಕೇಂದ್ರ ಸರ್ಕಾರದ ಅಂಕಿ ಅಂಶ

ನವದೆಹಲಿ,  ಏ ೧೦, ದೇಶಾದ್ಯಂತ    ಕೊರೊನಾ  ವೈರಾಣು  ಪ್ರಭಾವ  ಕುರಿತು  ಕೇಂದ್ರ  ಸರ್ಕಾರ   ಶುಕ್ರವಾರ  ಹೆಲ್ತ್  ಬುಲಿಟಿನ್  ಬಿಡುಗಡೆ ಮಾಡಿದೆ.  ಕಳೆದ  ೨೪  ಗಂಟೆಗಳಲ್ಲಿ  ದೇಶದಲ್ಲಿ   ಹೊಸದಾಗಿ  ೬೭೮  ಕೊರೊನಾ ಸೋಂಕು   ಪ್ರಕರಣಗಳು  ವರದಿಯಾಗಿವೆ  ಎಂದು  ಕೇಂದ್ರ ಆರೋಗ್ಯ ಸಚಿವಾಲಯದ  ಜಂಟಿ ಕಾರ್ಯದರ್ಶಿ ಲವ್ ಅಗರ್ವಾಲ್ ತಿಳಿಸಿದ್ದಾರೆ.ಇದರೊಂದಿಗೆ   ದೇಶದಲ್ಲಿ  ಕೊರೊನಾ  ದೃಢ  ಪಟ್ಟ ಪ್ರಕರಣಗಳ ಸಂಖ್ಯೆ ೬,೪೧೨ ಕ್ಕೆ ತಲುಪಿದ್ದು,  ಒಟ್ಟು  ೫೦೩ ಮಂದಿ  ಕೊರೊನಾ ರೋಗದಿಂದ  ಚೇತರಿಸಿಕೊಂಡಿದ್ದಾರೆ. ಕಳೆದ ೨೪ ಗಂಟೆಗಳಲ್ಲಿ  ಕೊರೊನಾ ಸೋಂಕಿನಿಂದ  ದೇಶಾದ್ಯಂತ ೩೩ ಮಂದಿ ಮೃತಪಟ್ಟಿದ್ದು,ಈವರೆಗೆ ೧೯೯ ಜನರು ಸಾವನ್ನಪ್ಪಿದಂತಾಗಿದೆ  ಎಂದು ಲವ್ ಅಗರ್ ವಾಲ್  ವಿವರಿಸಿದರು.೬೭ ಖಾಸಗಿ ಲ್ಯಾಬ್‌ಗಳಲ್ಲಿ ಕೋವಿಡ್ -೧೯  ನಿರ್ಧರಣ  ಪರೀಕ್ಷೆಗಳನ್ನು  ನಡೆಸಲಾಗುತ್ತಿದೆ. ದೇಶದಲ್ಲಿ  ೩.೨೮ ಕೋಟಿ ಹೈಡ್ರೋಕ್ಲೋರೋಕ್ವಿನ್ ಮಾತ್ರೆಗಳು ಲಭ್ಯವಿದೆ ಎಂದು  ಪ್ರಶ್ನೆಯೊಂದಕ್ಕೆ  ಅಗರ್ವಾಲ್  ಉತ್ತರಿಸಿದರು.