ಕೊರೋನಾ ಸೋಂಕಿಗೆ ಕೇರಳದಲ್ಲಿ ಮೊದಲ ಬಲಿ

ಕೊಚ್ಚಿ, ಮಾ.28, ಕೇರಳದಲ್ಲಿ ಕೊರೋನ ವೈರಸ್ ಸೋಂಕಿಗೆ ವ್ಯಕ್ತಿಯೊಬ್ಬರು ಮೃತಪಟ್ಟಿದ್ದು, ಇದರೊಂದಿಗೆ ರಾಜ್ಯದಲ್ಲಿ ಮೊದಲ ಸಾವು ಸಂಭವಿಸಿದಂತಾಗಿದೆ.ಕೊಚ್ಚಿ ಮೂಲದ 69 ವರ್ಷದ ವೃದ್ಧರೊಬ್ಬರು ಇಂದು ಮೃತಪಟ್ಟಿದ್ದು, ಅವರು ದುಬೈಯಿಂದ ವಾಪಸಾಗಿದ್ದರು. ನ್ಯುಮೋನಿಯಾ ಸಮಸ್ಯೆ ಹಿನ್ನೆಲೆಯಲ್ಲಿ ಅವರನ್ನು ಮಾರ್ಚ್ 22 ರಂದು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ. ಕೊರೋನ ಸೋಂಕು ಇವರಿಗೆ ತಗಲಿರುವುದನ್ನು ವೈದ್ಯರು ದೃಢಪಡಿಸಿದ್ದಾರೆ.ಕೊರೋನಕ್ಕೆ ಬಲಿಯಾದ ವ್ಯಕ್ತಿ ಈ ಮೊದಲು ಬೈಪಾಸ್ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು ಮತ್ತು ಹೃದಯ ರೋಗಿಯಾಗಿದ್ದರು ಅಧಿಕ ರಕ್ತದೊತ್ತಡ ಸಮಸ್ಯೆ ಎದುರಿಸುತ್ತಿದ್ದರು ಎನ್ನಲಾಗಿದೆ.ಕೇರಳ ರಾಜ್ಯದಲ್ಲಿ ಕೊರೋನ ಸೋಂಕಿತರ ಸಂಖ್ಯೆ 173ಕ್ಕೇರಿದೆ.