ಕೊರೊನಾ ಸೋಂಕು : ಚೀನಾಗಿಂತ ಅಮೆರಿಕದಲ್ಲಿ ಹೆಚ್ಚು ಪ್ರಕರಣ

ವಾಷಿಂಗ್ಟನ್, ಮಾರ್ಚ್ 27, ಇತ್ತೀಚೆಗೆ ಕಾಣಿಸಿಕೊಂಡು ವ್ಯಾಪಕವಾಗಿ ಹರಡುತ್ತಿರುವ ಕೊರೊನಾ ವೈರಾಣು ಸೋಂಕು ಚೀನಾಗಿಂತ ಅಮೆರಿಕದಲ್ಲಿ ಹೆಚ್ಚು ಜನರಿಗೆ ತಗುಲಿದೆ.ಅತಿ ಹೆಚ್ಚಿನ ಜನರು ಈ ಸೋಂಕಿನಿಂದ ಬಳಲುತ್ತಿರುವುದು ಅಮೆರಿಕದಲ್ಲಿ ಎಂದು ಜಾನ್ ಹಾಪ್ಕಿನ್ಸ್ ವಿಶ್ವವಿದ್ಯಾಲಯದ ಜಾಲತಾಣದಲ್ಲಿ ಪ್ರಕಟಿಸಿರುವ ಅಂಕಿಅಂಶಗಳು ತಿಳಿಸಿವೆ.ಚೀನಾದಲ್ಲಿ ಮೊದಲ ಬಾರಿಗೆ ಕಾಣಿಸಿಕೊಂಡು ವ್ಯಾಪಕವಾಗಿ ಹರಡಿದ್ದರೂ ಚೀನಾಗಿಂತ ಅಮೆರಿಕದಲ್ಲಿ ಈ ಸೋಂಕಿಗೆ ಹೆಚ್ಚು ಜನರು ತುತ್ತಾಗಿದ್ದಾರೆ. ಅಮೆರಿಕದಲ್ಲಿ 82404 ಕೋವಿಡ್ 19 ಪ್ರಕರಣಗಳಿವೆ. ಚೀನಾದಲ್ಲಿ 81782 ಕೋವಿಡ್ 19 ಪ್ರಕರಣಗಳಿವೆ ಎಂದು ಅಂಕಿಅಂಶ ತಿಳಿಸಿದೆ.