ಪ್ರಪಂಚದಾದ್ಯಂತ 65 ಲಕ್ಷಕ್ಕೂ ಹೆಚ್ಚು ಜನರಿಗೆ ಕೊರೊನಾ ಸೋಂಕು : ವಿಶ್ವ ಆರೋಗ್ಯ ಸಂಸ್ಥೆ

ಮಾಸ್ಕೋ, ಜೂನ್ 6,ಪ್ರಪಂಚದಾದ್ಯಂತ 65,35,354 ಜನರಿಗೆ ಕೊರೊನಾ ವೈರಾಣು ಸೋಂಕು ತಗುಲಿದ್ದು 3,87,000 ಜನರು ಸೋಂಕಿನಿಂದ ಮೃತಪಟ್ಟಿದ್ದಾರೆ ಎಂದು ವಿಶ್ವ ಆರೋಗ್ಯ ಸಂಸ್ಥೆ ತಿಳಿಸಿದೆ.ವಿಶ್ವ ಸಂಸ್ಥೆ ಶುಕ್ರವಾರ ನೀಡಿರುವ ವರದಿ ಪ್ರಕಾರ, ಕಳೆದೊಂದು ದಿನದಲ್ಲಿ 1,18,526 ಹೊಸ ಪ್ರಕರಣಗಳು ವರದಿಯಾಗಿದ್ದು 4,288 ಜನರು ಮೃತಪಟ್ಟಿದ್ದಾರೆ.ಈ ಮಧ್ಯೆ ಜಾನ್ಸ್ ಹಾಪ್ಕಿನ್ಸ್ ವಿಶ್ವವಿದ್ಯಾಲಯದ ಇತ್ತೀಚಿನ ವರದಿ ಪ್ರಕಾರ ವಿಶ್ವದಾದ್ಯಂತ ಒಟ್ಟು 67,31,770 ಪ್ರಕರಣಗಳು ವರದಿಯಾಗಿದ್ದು ಸೋಂಕಿನಿಂದ ಮೃತಪಟ್ಟವರ ಸಂಖ್ಯೆ 3,94,787 ರಷ್ಟಿದೆ. ಕೊರೊನಾ ವೈರಾಣು ಸೋಂಕನ್ನು ಮಾರ್ಚ್ 11 ರಂದು ವಿಶ್ವ ಆರೋಗ್ಯ ಸಂಸ್ಥೆ ಸಾಂಕ್ರಾಮಿಕ ಎಂದು ಘೋಷಿಸಿತ್ತು.