ಬ್ರೆಜಿಲ್‌ನಲ್ಲಿ 8 ಲಕ್ಷ ಜನರಿಗೆ ಕರೋನ ಸೋಂಕು,

ರಿಯೊ ಡಿ ಜನೈರೊ, ಜೂನ್ 14, ಬ್ರೆಜಿಲ್ನಲ್ಲಿ  ಇದುವರೆಗೆ 8 ಲಕ್ಷ  ಕರೋನ ಸೋಂಕು ಪ್ರಕರಣ ದಾಖಲಾಗಿದ್ದು, 42,ಸಾವಿರಕ್ಕೂ ಹೆಚ್ಚು  ಜನರು  ಮಾರಕ ಸೋಂಕಿಗೆ ಬಲಿಯಾಗಿದ್ದಾರೆ  ಎಂದು  ಆರೋಗ್ಯ ಸಚಿವಾಲಯ ಶನಿವಾರ ವರದಿ ಮಾಡಿದೆ.ಕಳೆದ 24 ಗಂಟೆಗಳಲ್ಲಿ 21 ಸಾವಿರಕ್ಕೂ ಹೆಚ್ಚು   ಹೊಸ ಸೋಂಕು ಪ್ರಕರಣ ದಾಖಲಾಗಿದ್ದರೆ ಇದೆ ಅವಧಿಯಲ್ಲಿ    892  ಜನ ಮೃತಪಟ್ಟಿದ್ದಾರೆ ಎಂದು  ಸಚಿವಾಲಯ  ತಿಳಿಸಿದೆ.ಬ್ರೆಜಿಲ್‌ನಲ್ಲಿ  ಹೆಚ್ಚಿನ ಜನಸಂಖ್ಯೆ ಹೊಂದಿರುವ ಸಾವೊ ಪಾಲೊದಲ್ಲಿ  172,875 ಪ್ರಕರಣಗಳು ಮತ್ತು 10,581 ಸಾವಿನ ಪ್ರಕರಣ  ದಾಖಲಾಗಿದೆ,  ರಿಯೊ ಡಿ ಜನೈರೊದಲ್ಲಿ 78,836 ಪ್ರಕರಣಗಳು ಮತ್ತು 7,592 ಸಾವು ಸಂಭವಿಸಿದೆ. ಅಮೆರಿಕ ನಂತರ ವಿಶ್ವದ ಎರಡನೇ ಅತಿ ಹೆಚ್ಚು ಸೋಂಕು, ಸಾವಿನ   ಪ್ರಕರಣಗಳನ್ನು ಹೊಂದಿರುವ ಬ್ರೆಜಿಲ್, ಬ್ರಿಟನ್ನನ್ನು ಹಿಂದಕ್ಕೆ ತಳ್ಳಿ  ಎರಡನೆ ಸ್ಥಾನಕ್ಕೆ ಹೋಗಿದೆ.