ಗೋವಾಕ್ಕೆ ರೈಲಿನಲ್ಲಿ ಬಂದವರ ಪೈಕಿ 7 ಪ್ರಯಾಣಿಕರಲ್ಲಿ ಕರೋನ ಸೋಂಕು

ಪಣಜಿ,  ಮೇ 18, ಮುಂಬೈ-ಗೋವಾ ರೈಲಿನಲ್ಲಿ ರಾಜ್ಯಕ್ಕೆ ಬಂದ ಪ್ರಯಾಣಿಕರ ಪೈಕಿ  ಏಳು ಪ್ರಯಾಣಿಕರಲ್ಲಿ ಕರೋನ ಸೋಂಕು ಇರುವುದು ವೈದ್ಯಕೀಯ ಪರೀಕ್ಷೆಯಿಂದ  ಖಚಿತವಾಗಿದೆ. ಪರಿಣಾಮ ರಾಜ್ಯದಲ್ಲಿ  ಸೋಂಕಿತ ಸಂಖ್ಯೆ  ಈವರೆಗೆ  29 ಕ್ಕೆ ತಲುಪಿದೆ ಎಂದು ರಾಜ್ಯದ  ಆರೋಗ್ಯ ಸಚಿವ ವಿಶ್ವಜಿತ್ ರಾಣೆ ಸೋಮವಾರ ಹೇಳಿದ್ದಾರೆ.ಈ ಕುರಿತು   ಟ್ವೀಟ್ ಮಾಡಿರುವ ಅವರು,  ಭಾನುವಾರ ರಾಜ್ಯಕ್ಕೆ ಬಂದ ರೈಲಿನಲ್ಲಿ ಬಂದ ಪ್ರಯಾಣಿಕರ ಪೈಕಿ  7 ಪ್ರಯಾಣಿಕರಲ್ಲಿ  ಸೋಂಕು ಇರುವುದು ಖಚಿತವಾಗಿದೆ ಎಂದು ಹೇಳಿದರು. ಇನ್ನೂ  350 ಮಾದರಿಗಳನ್ನು ಸಂಗ್ರಹ ಮಾಡಿದ್ದು ಅವುಗಳ ಪೈಕಿ   70 ಪ್ರಕರಣಗಳ  ಪರೀಕ್ಷೆ ಇನ್ನೂ ಬಾಕಿಯಿದೆ  ಪರೀಕ್ಷಾ ಸೌಲಭ್ಯಗಳನ್ನು ಹೆಚ್ಚಿಸಲು ಸರ್ಕಾರ ಕ್ರಮ ಕೈಗೊಂಡಿದೆ ಎಂದೂ  ಸಚಿವರು ಹೇಳಿದರು.