ಲಿಮಾ, ಜೂ 2, ಪೆರುವಿನಲ್ಲಿ 5,563 ಹೊಸ ಕೊರೊನಾ ವೈರಾಣು ಸೋಂಕು ಪ್ರಕರಣಗಳು ಮತ್ತು 128 ಸಾವಿನ ಪ್ರಕರಣಗಳು ವರದಿಯಾಗಿದ್ದು ಒಟ್ಟು ಸೋಂಕಿತರ ಸಂಖ್ಯೆ 1,70,039 ಕ್ಕೆ ಮತ್ತು ಮೃತರ ಸಂಖ್ಯೆ 4,634 ಕ್ಕೆ ಏರಿಕೆಯಾಗಿದೆ.ರಾಜಧಾನಿ ಲಿಮಾದಲ್ಲಿ ಅತಿ ಹೆಚ್ಚು 1,03,020 ಪ್ರಕರಣಗಳು ವರದಿಯಾಗಿದ್ದು ಪಶ್ಚಿಮ ಮಧ್ಯ ಪ್ರಾಂತ್ಯ ಕಲ್ಲೋದಲ್ಲಿ 12,495 ಪ್ರಕರಣಗಳು ದೃಢಪಟ್ಟಿವೆ ಎಂದು ಆರೋಗ್ಯ ಸಚಿವಾಲಯದ ಹೇಳಿಕೆ ತಿಳಿಸಿದೆ. ಈವರೆಗೆ 8,868 ಜನರು ಕೋವಿಡ್ -19 ಕ್ಕೆ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದು 975 ಜನರು ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಹೇಳಿಕೆ ಮಾಹಿತಿ ನೀಡಿದೆ. ಮೇ ಅಂತ್ಯದ ವೇಳೆಗೆ ಪೆರುವಿನಲ್ಲಿ ಲಾಕ್ ಡೌನ್ ಸಡಿಲಿಕೆ ಮಾಡಲಾಗಿದೆ. 27 ವಿವಿಧ ವಲಯಗಳಲ್ಲಿ ಆರ್ಥಿಕ ಚಟುವಟಿಕೆಗಳಿಗೆ ಅವಕಾಶ ನೀಡಲಾಗಿದೆ.