ಕೊರೊನಾ ವಾರಿಯರ್ ತುಂಬು ಗರ್ಭಿಣಿಗೆ ಸಿಎಂ ಅಭಿನಂದನೆ

ಶಿವಮೊಗ್ಗ, ಮೇ 10, ತುಂಬು ಗರ್ಭಿಣಿಯಾಗಿದ್ದರೂ ರಜೆ ತೆಗೆದುಕೊಳ್ಳದೇ ಆಸ್ಪತ್ರೆಯಲ್ಲಿ ಅವಿತರವಾಗಿ ಸೇವೆ ಸಲ್ಲಿಸುತ್ತಿರುವ ಶುಶ್ರೂಕಿಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಅಭಿನಂದನೆ ಸಲ್ಲಿಸಿದ್ದಾರೆ.ಶುಶ್ರೂಕಿ ರೂಪಾ ಅವರು 9  ತಿಂಗಳು ತುಂಬು ಗರ್ಭಿಣಿಯಾಗಿದ್ದರೂ ರಜೆ ತೆಗೆದುಕೊಳ್ಳದೆ ತೀರ್ಥಹಳ್ಳಿಯ ಶ್ರೀ  ಜಯಚಾಮರಾಜೇಂದ್ರ ತಾಲ್ಲೂಕು ಆಸ್ಪತ್ರೆಯಲ್ಲಿ ಶೂಶ್ರುಕಿಯಾಗಿ   ಕಾರ್ಯ‌ನಿರ್ವಹಿಸುತ್ತಿದ್ದಾರೆ. ರೂಪ ಅವರು  ಶಿವಮೊಗ್ಗದ ಗಾಜನೂರು ಗ್ರಾಮದಿಂದ 60 ಕಿ.ಮೀ ದೂರವಿರುವ ತೀರ್ಥಹಳ್ಳಿ  ಪಟ್ಟಣಕ್ಕೆ ಪ್ರತಿದಿನ ಬಸ್ಸಿನಲ್ಲೇ ಪ್ರಯಾಣಿಸಿ ಸೇವೆ ಸಲ್ಲಿಸುತ್ತಿದ್ದಾರೆ.9  ತಿಂಗಳು ಗರ್ಭಿಣಿಯಾಗಿದ್ದರೂ ಪ್ರತಿದಿನ ಸುಮಾರು 120 ಕಿ.ಮೀ ಪ್ರಯಾಣ ಮಾಡುವ ಇವರು  ಕೊರೊನಾ ವಾರಿಯರ್ಸ್ ಏನು ಅನ್ನುವುದನ್ನು ತೋರಿಸಿಕೊಟ್ಟಿದ್ದಾರೆ ಎಂದು ಮುಖ್ಯಮಂತ್ರಿಗಳು  ಅಭಿನಂದನೆ ಸಲ್ಲಿಸಿದ್ದಾರೆ.ಅಲ್ಲದೇ, ಅವರು ಕೂಡಲೇ ರಜೆ ತೆಗೆದುಕೊಂಡು ಮನೆಯಲ್ಲೇ ವಿಶ್ರಾಂತಿ ಪಡೆಯುವಂತೆ ಮುಖ್ಯಮಂತ್ರಿಗಳು, ರೂಪಾ ಅವರಿಗೆ ಸೂಚನೆ ನೀಡಿದ್ದಾರೆ.