ಕರೋನಾ ವೈರಸ್ ಎಫೆಕ್ಟ್ ; ಮೋದಿಗೆ ಸೆಲ್ಯೂಟ್ ಎಂದ ಶತ್ರುಘ್ನ ಸಿನ್ಹಾ ..!

ಪಾಟ್ನಾ, ಫೆ ೩ :       ಬಿಜೆಪಿ ನಾಯಕರ  ಮೇಲೆ   ಅದರಲ್ಲೂ  ವಿಶೇಷವಾಗಿ ಪ್ರಧಾನಿ ನರೇಂದ್ರ ಮೋದಿ  ವಿರುದ್ದ  ಸದಾ ಟೀಕಾ ಪ್ರಹಾರ ನಡೆಸುವ  ಕಾಂಗ್ರೆಸ್ ಮುಖಂಡ,   ಮಾಜಿ  ಕೇಂದ್ರ ಸಚಿವ  ಶತ್ರುಘ್ನ  ಸಿನ್ಹಾ   ಒಂದು  ಅಚ್ಚರಿಯ  ಟ್ವೀಟ್  ಮಾಡಿದ್ದಾರೆ. 

ಕೇಂದ್ರದ  ಬಿಜೆಪಿ    ಸರ್ಕಾರದ   ವಿರುದ್ದ    ಕಟು ಟೀಕಾಕಾರರಾಗಿರುವ  ರೆಬಲ್  ನಾಯಕ, ಪ್ರಧಾನಿ ನರೇಂದ್ರ ಮೋದಿ  ನೇತೃತ್ವದ   ಬಿಜೆಪಿ ಸರ್ಕಾರದ ಬಗ್ಗೆ    ಪ್ರಶಂಶೆ ವ್ಯಕ್ತಪಡಿಸಿ  ಅಚ್ಚರಿ ಮೂಡಿಸಿದ್ದಾರೆ.  ಚೀನಾದಾದ್ಯಂತ  ವ್ಯಾಪಾಕವಾಗಿ ಹರಡುತ್ತಿರುವ ಮಾರಣಾಂತಿಕ ಕರೋನಾ ವೈರಸ್   ಹಿನ್ನೆಲೆಯಲ್ಲಿ  ಕೇಂದ್ರ ಸರ್ಕಾರ   ಚೀನಾದ ವುಹಾನ್‌ನಲ್ಲಿರುವ ಭಾರತೀಯರನ್ನು   ತ್ವರಿತವಾಗಿ   ಸ್ವದೇಶಕ್ಕೆ  ಕರೆತರುವಲ್ಲಿ  ಸಫಲವಾಗಿದೆ. ಬೋಯಿಂಗ್ ೭೪೭ ವಿಶೇಷ ವಿಮಾನ ಮೂಲಕ  ಅಲ್ಲಿದ್ದ   ಭಾರತೀಯರಿಗೆ    ಕರೋನಾ  ಸೋಂಕು ತಗುಲದಂತೆ   ಶೀಘ್ರ ಕ್ರಮ ಕೈಗೊಂಡಿರುವ ಕೇಂದ್ರ ಸರ್ಕಾರವನ್ನು   ಶತ್ರುಘ್ನ  ಸಿನ್ಹಾ ಅಭಿನಂದಿಸಿದ್ದಾರೆ.  

ಪ್ರಧಾನಿ ಮೋದಿ  ಅವರಿಗೆ  ಸಲ್ಯೂಟ್   ಎಂಬ  ಪ್ರಶಂಸೆಯನ್ನು  ಟ್ವೀಟ್  ಖಾತೆಯಲ್ಲಿ   ಶತ್ರುಘ್ನ  ಸಿನ್ಹಾ     ಪೋಸ್ಟ್  ಮಾಡಿದ್ದಾರೆ.