ಕೊರೊನಾ ನೆಗೆಟಿವ್: ಯಾರೂ ಆತಂಕ ಪಡುವ ಅಗತ್ಯವಿಲ್ಲ: ಅರುಣಕುಮಾರ

ಲೋಕದರ್ಶನವರದಿ

ರಾಣೇಬೆನ್ನೂರು: ಏ.24: ಕರೋನಾ ವೈರಸ್ ಸೊಂಕು ಹರಡಿದೆ ಎನ್ನುವ ಸುಳ್ಳು ಸುದ್ದಿಯಿಂದಾಗಿ ವಾಣಿಜ್ಯ ನಗರದ ಜನತೆ ಭಯಬೀತರಾಗಿದ್ದಾರು.  ಇದು ಸಹಜವೂ ಸಹ ತಾವೂ ಸಹ ಬುಧವಾರದಿಂದ ಇದು ಸತ್ಯವೋ, ಅಥವಾ ಸುಳ್ಳೋ ಎನ್ನವು ಧಾವಂತದಲ್ಲಿಯೇ ಕಾಲ ತಳ್ಳುವಂತಾಗಿತ್ತು.  ಗುರುವಾರ ಪ್ರಯೋಗಾಲಯದಿಂದ ನೆಗೆಟಿವ್ ಎನ್ನವು ವರದಿ ಬಂದ ಕೂಡಲೇ ನಗರದ ಜನತೆ ನಿರಾಳರಾಗಿದ್ದಾರೆ ಎಂದು ಶಾಸಕ ಅರುಣಕುಮಾರ ಪೂಜಾರ ಹೇಳಿದರು.

ಗುರುವಾರ ಈ ಕುರಿತು ತಾಪಂ ಭವನದ ಅವರಣದಲ್ಲಿರುವ ಶಾಸಕರ ಸಂಪರ್ಕ ಕಾಯರ್ಾಲಯದಲ್ಲಿ ಪತ್ರಿಕೆಯೊಂದಿಗೆ ಮಾತನಾಡಿದರು. ರಾಜ್ಯದ ಬಹುತೇಕ ಜಿಲ್ಲೆಗಳ ವ್ಯಾಪ್ತಿಯಲ್ಲಿ ಕರೋನಾ ವೈರಸ್ ಹರಡಿತ್ತು.  ಆದರೆ, ಕಳೆದ ಒಂದು ತಿಂಗಳಿನಿಂದಲೂ ನಮ್ಮ ನಗರ ಮತ್ತು ತಾಲೂಕಿನ ಯಾವುದೇ ಭಾಗದಲ್ಲಿಯೂ ಈ ಮಹಾಮಾರಿ ಘಟನೆ ಸಂಭಿಸದೇ ಇರುವುದೇ ನಮ್ಮೆಲ್ಲರ ಅದೃಷ್ಠವೆಂದು ಭಾವಿಸಿದ್ದೇವೆ.  ಇದೆಲ್ಲವೂ ನಗರದೇವತೆ ಶ್ರೀ ಗಂಗಾಜಲ ಚೌಡೇಶ್ವರಿ ದೇವಿ ಮತ್ತು ಶ್ರೀ ಗುರುಕೊಟ್ಟೂರೇಶ್ವರ ಸ್ವಾಮಿಯ ಅನುಗ್ರಹವೇ ಸರಿ ಎಂದರು. 

ಬುಧವಾರ ಮಧ್ಯರಾತ್ರಿಯಿಂದ  ರಾಜಧಾನಿಯಲ್ಲಿ ನಿಭಂಧನೆಗೊಳಪಟ್ಟು ಕೇಂದ್ರ ಮತ್ತು ರಾಜ್ಯ ಸಕರ್ಾರ ಲಾಕ್ಡೌನ್ ಸಡಿಲಿಸಿ ಕೆಲವುಗಳಿಗೆ ಮಾತ್ರ ಅವಕಾಶ ನೀಡಿದೆ.  ಅದೇ ರೀತಿ ನಗರದಲ್ಲಿ ಇಲ್ಲಿಯವರೆಗೂ ತರಕಾರಿ ವ್ಯಾಪಾರಸ್ಥರು ಇತರೆ, ಅಗತ್ಯ ಜೀವನಾವಶ್ಯಕ ವಸ್ತುಗಳ ಅಂಗಡಿಕಾರರಿಗೆ ಸಮಯ ನಿಗದಿಪಡಿಸಿ ತಮ್ಮ ವ್ಯಾಪಾರ ವಹಿವಾಟು ನಡೆಸಲು ಅವಕಾಶ ಕಲ್ಪಿಸಲಾಗಿತ್ತು. 

 ಪೋಲೀಸ್ ಇಲಾಖೆಯ ಕಟ್ಟು-ನಿಟ್ಟಿನ ನಿಭಂದನೆಯಲ್ಲಿ ಎಲ್ಲ ವ್ಯಾಪಾರಸ್ಥರು ಸ್ಪಂಧಿಸಿದ್ದಾರೆ.  ಇದೇ ರೀತಿ ಮುಂದುವರೆಯಬೇಕು ಎನ್ನುವುದೇ ತಮ್ಮ ಆಶಯವಾಗಿದೆ ಎಂದರು.

ಜಿಲ್ಲೆ ಮತ್ತು ತಾಲೂಕಿನ ಇನ್ನು ಕೆಲವು ಭಾಗಗಳಲ್ಲಿ ಅಂತರ್ರಾಜ್ಯಗಳಿಂದ ನಾಗರೀಕರು ಧಾವಿಸಿದ್ದಾರೆ ಎನ್ನುವ ಮಾಹಿತಿ ಅಲ್ಲಲ್ಲಿ ಕೇಳಿ ಬರುತ್ತಲಿದೆ.   ಬರಬರಾದೆನ್ನುವ ನಿರ್ಭಂದವೇನು ಇಲ್ಲ, ಬಂದವರು ತಮ್ಮ ಸಂಪೂರ್ಣ ಮಾಹಿತಿ ಒದಗಿಸಿ ಆರೋಗ್ಯ ಇಲಾಖೆ ನಿಧರ್ಿಷ್ಟಪಡಿಸಿದ ಪರೀಕ್ಷೆಗೊಳಪಡಲು ಸ್ವಯಂ ಪ್ರೇರಣೆಯಿಂದ ಮುಂದಾಗಬೇಕು ಇದರಿಂದ ಯಾವುದೇ ಅವಗಢಗಳು ಸಂಭವಿಸುವುದಿಲ್ಲ.  

   ತಾಲೂಕಿನ ಮಹಾಜನತೆ ಪೋಲೀಸ್ ಆರೋಗ್ಯ, ತಾಲೂಕಾಡಳಿತ ಮತ್ತು ಶಾಸಕಾಂಗ ಆಡಳಿತದೊಂದಿಗೆ ಸಹಕರಿಸಲು ಮುಂದಾಗಬೇಕು ಎಂದು ಪೂಜಾರ ಅವರು ಮನವಿ ಮಾಡಿದರು.

ಈ ಸಂದರ್ಭದಲ್ಲಿ ನಗರಯೋಜನಾ ಪ್ರಾಧಿಕಾರದ ಅಧ್ಯಕ್ಷ ಚೋಳಪ್ಪ ಕಸವಾಳ, ದೀಪಕ್ ಹರಪನಹಳ್ಳಿ, ಪವನ್ ಮಲ್ಲಾಡದ, ಅನೀಲ್ ಸಿದ್ಧಾಳಿ ಸೇರಿದಂತೆ ಮತ್ತಿತರ ಮುಖಂಡರು ಉಪಸ್ಥಿತರಿದ್ದರು.