ಬೆಂಗಳೂರು, ಮಾ.30, ಶ್ರೀರಂಗಪಟ್ಟಣದಲ್ಲಿ ನಿಗದಿಯಾಗಿದ್ದ ವಿವಾಹವನ್ನು ಮನೆ ಮಂದಿ ಸೇರಿ ಕೇವಲ ಹತ್ತೇ ನಿಮಿಷಗಳಲ್ಲಿ ನೆರವೇರಿಸಿದ ಪ್ರಸಂಗ ಕೆಆರ್‌ಎಸ್‌ನಲ್ಲಿ ನಡೆದಿದೆ.ಕೆಆರ್‌ಎಸ್‌ನ ತಲಕಾಡು ಗ್ರಾಮದ ನವೀನಾ ಮತ್ತು ಪ್ರಶಾಂತ್ ವಿವಾಹ ಈ ಹಿಂದೆಯೇ ನಿಶ್ಚಯಿಸಲಾಗಿತ್ತು. ಲಾಕ್‌ಡೌನ್ ನಿಯಮ ಪಾಲಿಸಲು ಮತ್ತು ಸಾಮಾಜಿಕ ಅಂತರ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಕಲ್ಯಾಣ ಮಂಟಪದಲ್ಲಿ ನಿಗದಿಯಾಗಿದ್ದ ವಿವಾಹ ರದ್ದುಪಡಿಸಿ ಮುಂಜಾಗ್ರತ ಕ್ರಮಗಳೊಂದಿಗೆ ವಧು-ವರರ ಮನೆಯವರು ಸೇರಿ ವಧುವಿನ ಮನೆಯಲ್ಲಿ ನಿನ್ನೆ ಮುಹೂರ್ತದಲ್ಲಿ ವಿವಾಹ ಶಾಸ್ತ್ರ ಮುಗಿಸಿದರು.
ಅತಿ ಕಡಿಮೆ ಸಂಖ್ಯೆಯಲ್ಲಿ ಸೇರಿದ್ದ ಎರಡೂ ಕಡೆಯವರ ಕುಟುಂಬಸ್ಥರು ಶಾಸ್ತ್ರೋಕ್ತವಾಗಿ ಮದುವೆ ನೆರವೇರಿಸಿ ಮಾದರಿಯಾದರು.