ಕೊರೊನಾ ಸಂಕಷ್ಟ : ಬಿಬಿಎಂಪಿ ಬಜೆಟ್ ಅನುದಾನ ಕಡಿತ ಮಾಡಿದ ಸರ್ಕಾರ

ಬೆಂಗಳೂರು,ಮೇ 14,ಮೇ ಕಳೆದ ಮೇ 7ರಂದು ಮಂಡನೆಯಾಗಿದ್ದ  ಬಿಬಿಎಂಪಿ ಬಜೆಟ್ ಗೆ ಸರ್ಕಾರ ಅನುಮೋದನೆ ಕೊಟ್ಟಿದೆ.ಕೊರೊನಾ ವೈರಸ್ ಲಾಕ್ ಡೌನ್ ಹಿನ್ನೆಲೆಯಲ್ಲಿ ಬಜೆಟ್ ಅನುದಾನ ಕಡಿಗೊಳಿಸಿ ಸರ್ಕಾರ ಅನುಮೋದನೆ ನೀಡಿದೆ. ಒಟ್ಟು 254.35 ಕೋಟಿ ರೂ.ಗಳಷ್ಟು ಅನುದಾನ ಕಡಿತಗೊಳಿಸಿ ಬಿಬಿಎಂಪಿ ಬಜೆಟ್ ಗೆ ಸರ್ಕಾರ ಅನುಮೋದನೆ ನೀಡಿದೆ. ಇತಿಹಾಸದಲ್ಲೆ ಮೊದಲ ಬಾರಿ ಕಳೆದ ಮೇ 7 ರಂದು ವಿಡಿಯೊ ಕಾನ್ಫರೆನ್ಸ್ ಮೂಲಕ ಬಿಬಿಎಂಪಿ ಬಜೆಟ್ ಮಂಡನೆ ಮಾಡಲಾಗಿತ್ತು. ಆರ್ಥಿಕ ಸ್ಥಾಯಿ ಸಮಿತಿ ಅಧ್ಯಕ್ಷ ಎಲ್. ಶ್ರೀನಿವಾಸ ಒಟ್ಟು  11,969.5 ಕೋಟಿ ರೂಪಾಯಿ  ಮೊತ್ತದ ಆಯವ್ಯಯ ಮಂಡನೆ ಮಾಡಿದ್ದರು. ಬಜೆಟ್ ನಲ್ಲಿ ದ 254.35 ಕೋಟಿಯಷ್ಟು ಕಡಿತಗೊಳಿಸಿದ ರಾಜ್ಯ ಸರ್ಕಾರ, ಉಳಿದ ಒಟ್ಟು ₹ 11,715.2 ಕೋಟಿ ರೂಪಾಯಿಗಳ ಮೊತ್ತಕ್ಕೆ ಅನುಮೋದನೆ ನೀಡಿ ರಾಜ್ಯ ಸರ್ಕಾರ  ಅಧಿಸೂಚನೆ ಹೊರಡಿಸಿದೆ. ಜೊತೆಗೆ 2019-20ನೇ ಸಾಲಿನ ಪರಿಷ್ಕೃತ ಬಜೆಟ್ ಅಂಗೀಕರಿಸಿದೆ.