ಲೋಕದರ್ಶನ ವರದಿ
ಗುತ್ತಲ೧೦ : ಓ ನನ್ನ ದೇಶ ಬಂಧುಗಳೆ ನಿಮಗೊಂದು ನನ್ನಯ ಮನವಿ ಈ ದೇಶದ ಆದೇಶ ಪಾಲಿಸಿ ಕೋರೊನ ಮುಕ್ತವಾಗಿಸಿ ಎಂಬ ಕೋರೊನಾ ಜಾಗೃತಿಯ ಹಾಡು ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ.
ಈ ಒಂದು ಗೀತೆಯ ಸಾಹಿತ್ಯವನ್ನು ಗದಗ ಜಿಲ್ಲೆಯ ಶಿರಹಟ್ಟಿ ತಾಲೂಕ ಸಾಸರವಾಡ ಗ್ರಾಮದ ನೀಲನಗೌಡ ಪಾಟೀಲ ರವರು ರಚಿಸಿಸದ್ದು ಹಾವೇರಿ ತಾಲೂಕಿನ ನೆಗಳೂರ ಗ್ರಾಮದ ಗಾಯಕ ಕನರ್ಾಟಕ ಗಾನಸಿರಿ ಪ್ರಶಸ್ತಿ ಪುರಸ್ಕೃತೆ ಶ್ರೀಮತಿ ಮಂಜುಳಾ ಕೊಪ್ಪದ ಅವರು ಹಾಡಿದ್ದು ಈ ಒಂದು ಗೀತೆ ಇತ್ತಿಚೆಗೆ ಬಹಳಷ್ಟು ಪ್ರಚಲಿತವಿರುವಂತಹ ಹಲೋ ಆ್ಯಪ್,ಫೇಸ್ಬುಕ್,ವಾಟ್ಸಪ್ ಸೇರಿದಂತೆ ಸಾಮಾಜಿಕ ಜಾಲತಾಣದ ಇನ್ನಿತರೆ ಆ್ಯಪ್ಗಳಲಿ ಹರಿದಾಡುತ್ತಾ ಕೋರೊನಾ ಜಾಗೃತಿಯನ್ನು ಮೂಡಿಸುತ್ತಿದೆ. ಗಾಯಕಿಯಾದ ಮಂಜುಳಾ ಕೊಪ್ಪದ ಅವರು ವೃತ್ತಿಯಲ್ಲಿ ನೆಗಳೂರಿನ ಪ್ರಾಥಮಿಕ ಶಾಲೆಯಲ್ಲಿ ಬಿಸಿಯೂಟ ತಯಾರಿಕೆಯ ಅಡುಗೆಯ ಸಹಾಯಕಿಯಾಗಿ ಕಾರ್ಯನಿರ್ವಹಿಸುತ್ತಿರುವ ಅವರು ಇತ್ತೀಚೆಗೆ ಸಂಗೀತ ಕಲೆಗೆ ಮನಸೋತು ಹಾಡುಗಳನ್ನು ಹಾಡುವ ಮೂಲಕ ತಮ್ಮ ಮಧುರ ಕಂಠದಿಂದ ಮಂಜುಳ ಗಾನವನ್ನು ಸುರಿಸುತ್ತಿದ್ದಾರೆ.
ಇಡೀ ಜಗತ್ತನ್ನು ತಲ್ಲಣಗೊಳಿಸಿರುವ ಕೋರೊನಾ ವೈರಸ್ ಎಂಬ ಮಹಾಮಾರಿ ಸಾಂಕ್ರಾಮಿಕ ರೋಗದ ಕುರಿತು ಜಾಗೃತಿ ಗೀತೆಯನ್ನು ಬರೆದಿರುವ ಗ್ರಾಮೀಣ ಭಾಗದ ಕಲಾ ಪ್ರತಿಭೆ ಸಾಸರವಾಡ ಗ್ರಾಮದ ನೀಲನಗೌಡ ಪಾಟೀಲ ಹಾಗೂ ಈ ಒಂದು ಸಾಹಿತ್ಯಕ್ಕೆ ತಮ್ಮ ಮಧುರ ಕಂಠದಿಂದ ಗೀತೆಯನ್ನು ಹಾಡಿರುವ ನೆಗಳೂರ ಗ್ರಾಮದ ಮಂಜುಳಾ ವರು ಅದ್ಭುತವಾಗಿ ಹಾಡಿದ್ದು ಈ ಒಂದು ಗೀತೆ ಜಾಗೃತಿ ಮೂಡಿಸುವಲ್ಲಿ ಯಶಸ್ವಿಯಾಗಿದ್ದಾರೆ. -ಡಾ|| ಮಳೆಯೋಗಿಶ್ವರ ಶಿವಾಚಾರ್ಯ ಮಹಾಸ್ವಾಮಿಗಳು.ಮಾನಿಹಳ್ಳಿ ಪುರವರ್ಗಮಠ ಮಾನಿಹಳ್ಳಿ ತಾ|| ಹೂವಿನಹಡಗಲಿ.