ಮೆಕ್ಸಿಕೊ ನಗರ, ಜೂನ್ 7,ಮೆಕ್ಸಿಕೊದಲ್ಲಿ ಕಳೆದ 24 ಗಂಟೆಗಳಲ್ಲಿ ಸುಮಾರು 3,600 ಹೊಸ ಕರೋನಸೋಂಕು ಪ್ರಕರಣ ದಾಖಲಾಗಿದೆ. ಹೀಗಾಗಿ ದೇಶದಲ್ಲಿ ಈವರೆಗೆ ಒಟ್ಟು ಸೋಂಕು ಪ್ರಕರಣಗಳ ಸಂಖ್ಯೆ 113,000 ಕ್ಕೆ ತಲುಪಿದೆ ಮತ್ತು ಆರೋಗ್ಯ ಸಚಿವಾಲಯದ ಪ್ರಕಾರ ಸಾವಿನ ಸಂಖ್ಯೆ 13,500 ಕ್ಕೆ ಏರಿಕೆಯಾಗಿದೆ. ಕಳೆದ 24 ಗಂಟೆಗಳ ಆವಧಿಯಲ್ಲಿ 3,593 ಹೊಸ ಪ್ರಕರಣಗಳು ದಾಖಲಾಗಿವೆ. ಸಾಂಕ್ರಾಮಿಕ ರೋಗದ ಪ್ರಾರಂಭದಿಂದ ಈ ವರೆಗೆ ಒಟ್ಟು ಪ್ರಕರಣಗಳ ಸಂಖ್ಯೆ 113,619 ತಲುಪಿದೆ ಎಂದು ಮೆಕ್ಸಿಕೊದ ಸಾಂಕ್ರಾಮಿಕ ರೋಗಶಾಸ್ತ್ರದ ನಿರ್ದೇಶಕ ಜೋಸ್ ಲೂಯಿಸ್ ಅಲೋಮಿಯಾ ಶನಿವಾರ ಹೇಳಿದ್ದಾರೆ. ಒಂದು ವಾರದ ಹಿಂದೆ, ಮೆಕ್ಸಿಕೊದಲ್ಲಿ ಸುಮಾರು 90,000 ಕರೋನ ಸೋಂಕು ಪ್ರಕರಣಗಳು ವರದಿಯಾಗಿದ್ದು, 9 ಸಾವಿರ ಸಾವಿನ ಪ್ರಕರಣ ವರದಿಯಾಗಿತ್ತು.