ಕರೋನ: ಜಾಗತಿಕವಾಗಿ 4 ಲಕ್ಷ ಸಾವು, 70 ಲಕ್ಷ ಸೋಂಕು ಪ್ರಕರಣ ದಾಖಲು

ಮಾಸ್ಕೋ, ಜೂನ್ 8, ಪ್ರಪಂಚದಾದ್ಯಂತ ದೃ ಡಪಡಿಸಿದ  ಕರೋನಸೋಂಕು  ಪ್ರಕರಣಗಳ  ಸಂಖ್ಯೆ 70 ಲಕ್ಷ  ದಾಟಿದೆ. ಜಾನ್ಸ್ ಹಾಪ್ಕಿನ್ಸ್ ವಿಶ್ವವಿದ್ಯಾಲಯದ ಕೊರೊನಾವೈರಸ್ ಸಂಪನ್ಮೂಲ ಕೇಂದ್ರದ ಮಾಹಿತಿಯ ಪ್ರಕಾರ ಜಾಗತಿಕವಾಗಿ  ಈವರೆಗೆ ಸಾವಿನ ಸಂಖ್ಯೆ 402,000 ಕ್ಕಿಂತಲೂ ಹೆಚ್ಚಾಗಿದೆ.ವಿಶ್ವದಲ್ಲಿ 7,006,436 ದೃಡಪಡಿಸಿದ   ಕರೋನಸೋಂಕು   ಪ್ರಕರಣಗಳು ವರದಿಯಾಗಿದ್ದು ಇವರುಗಳ ಪೈಕಿ  ಈವರೆಗೆ ಮೂರು ಲಕ್ಷಕ್ಕೂ ಹೆಚ್ಚು ಜನರು ಮಾರಕ ಸೋಂಕಿನಿಂದ ಚೇತರಿಸಿಕೊಂಡಿದ್ದಾರೆ ಎಮದು ಹೇಳಿದೆ. ಹಾಪ್ಕಿನ್ಸ್ ವಿಶ್ವವಿದ್ಯಾಲಯದ ಇತ್ತೀಚಿನ ಮಾಹಿತಿಯ ಪ್ರಕಾರ, ಅಮೆರಿಕ ಅತಿ ಹೆಚ್ಚು ಪ್ರಕರಣಗಳನ್ನು  ಹೊಂದಿದ  ದೇಶಗಳ ಪೈಕಿ ಅಗ್ರಸ್ಥಾನ ಪಡೆದಿದೆ.