ರೈತರ ಬಡವರ ಏಳ್ಗೆಗಾಗಿ ಸಹಕಾರಿ ಸಂಸ್ಥೆಗಳು ಶ್ರಮಿಸಬೇಕು

ಲೋಕದರ್ಶನ ವರದಿ 

ಯರಗಟ್ಟಿ 7: ಸಹಕಾರಿ ಸಂಸ್ಥೆಗಳು ರೈತರ, ಬಡವರ, ಹಿಂದುಳಿದವರ, ಸಣ್ಣ ವ್ಯಾಪಾರಸ್ಥರ ಆಥರ್ಿಕವಾಗಿ ಸಬಲೀಕರಣಬಾಗುವ ನಿಟ್ಟಿನಲ್ಲಿ ಶ್ರಮಿಸಬೇಕು ಎಂದು ಶಾಸಕ ಆನಂದ ಮಾಮನಿ ಅಭಿಪ್ರಾಯಪಟ್ಟರು.

   ಇಲ್ಲಿನ ಬೆಣ್ಣಿ ಕಾಂಪ್ಲೆಕ್ಸ್ನಲ್ಲಿ ಮುಧೋಳ ವಿಜಯ ಸೌಹಾರ್ದ ಕ್ರೆಡಿಟ್ ಸಹಕಾರಿ ನಿ, 35 ನೇ ಶಾಖೆ ಉದ್ಘಾಟಿಸಿ ಮಾತನಾಡಿದರು.

   ಸಂಸ್ಥೆಯ ಅದ್ಯಕ್ಷ ಹನಮಂತ ನಿರಾಣಿ ಕಾರ್ಯಕ್ರಮದ ಅದ್ಯಕ್ಷತೆ ವಹಿಸಿ ಮಾತನಾಡುತ್ತಾ ನಿರಾಣಿ ಗ್ರೂಪ್ ಸಂಸ್ಥೆಯು ರೈತರ ಪರವಾಗಿ ಕಾರ್ಯನಿರ್ವಹಿಸುತ್ತಿದ್ದು ಈ ಭಾಗದ ರೈತರು ನಿರಾಣಿ ಸಕ್ಕರೆ ಕಾಖರ್ಾನೆಗೆ ಹೆಚ್ಚಾಗಿ ಕಬ್ಬು ಕಳಿಸುತ್ತಿದ್ದು ರೈತರ ಕಬ್ಬಿನ ಬಿಲ್ಲ ಸರಳವಾಗಿ ತಲುಪುವ ಉದ್ದೇಶದಿಂದ ಈ ಭಾಗದಲ್ಲಿ ಶಾಖೆಗಳನ್ನು ತೆರೆಯಲಾಗುತ್ತಿದೆ. ಈಗಾಗಲೇ ಮೂವತ್ತೇಳು ಶಾಖೆಯನ್ನು ಹೊಂದಿರುವ ನಮ್ಮ ಸಂಸ್ಥೆ ಒಂದು ನೂರು ಶಾಖೆಗಳನ್ನು ತೆರೆಯುವ ಗುರಿ ಹೊಂದಿದೆ, ನಮ್ಮ ಸಂಸ್ಥೆ ನೂರಾರು ನಿರುದ್ಯೋಗಿ ಯುವಕರಿಗೆ ಉದ್ಯೋಗ ಒದಗಿಸಿಕೊಟ್ಟಿದೆ. ಐದನೂರ ಕೋಟಿಗೂ ಹೆಚ್ಚು ಠೇವು ಹೊಂದಿ ನಾಲ್ಕು ನೂರಕ್ಕೂ ಹೆಚ್ಚು ಸಾಲ ನೀಡಿದ್ದು ಸುಮಾರು ಏಳು ಸಾವಿರ ಕೋಟಿ ವಹಿವಾಟು ನಡೆಸುತ್ತಿದೆ ಎಂದರು.

   ಬಾಗೀಜಿಕೊಪ್ಪ ಡಾ.ಶಿವಲಿಂಗ ಶಿವಾಚಾರ್ಯ ಶ್ರೀಗಳು ಸಾನಿದ್ಯ ವಹಿಸಿ ಇಲ್ಲಿನ ಜನರು ವಿಜಯ ಸೌಹಾರ್ದ ಸಂಸ್ಥೆಯ ಪ್ರಯೋಜನ ಪಡೆದು ವ್ಯಾಪಾರ ವಹಿವಾಟು ಮಾಡಿ ತಮ್ಮ ಜೀವನವನ್ನು ರೂಪಿಸಿಕೊಳ್ಳಬೇಕು ಎಂದು ಆಶಿರ್ವಚನ ನೀಡಿದರು. 

  ಸಂಸ್ಥೆಯ ಜಿ.ಎಂ ಜಿ.ಎಂ,ವೈದ್ಯ ಪ್ರಾಸ್ತಾವಿಕವಾಗಿ ಮಾತನಾಡಿದರು, ಎಪಿಎಮ್ಸಿ ಮಾಜಿ ಅದ್ಯಕ್ಷ ಬಸಯ್ಯ ಹಿರೇಮಠ, ಬಿ.ಎಮ್.ರಾಯರ ಮಾತನಾಡಿದರು, ಜಿ.ಪಂ.ಸದಸ್ಯ ಅಜೀತಕುಮಾರ ದೇಸಾಯಿ, ತಾ.ಪಂ.ಅದ್ಯಕ್ಷ ವಿನಯಕುಮಾರ ದೇಸಾಯಿ, ಡಾ.ಕೆ.ವ್ಹಿ.ಪಾಟೀಲ, ಗ್ರಾ.ಪಂ.ಅದ್ಯಕ್ಷೆ ಕಸ್ತೂರಿ ಕಡೆಮನಿ, ಪರ್ವತಗೌಡ ಪಾಟೀಲ, ಸೋಮಪ್ಪ ಕಳ್ಳಿಗುದ್ದಿ, ವ್ಹಿ.ಜಿ.ದೇವರಡ್ಡಿ, ಈರಪ್ಪ ಚಳಕೊಪ್ಪ, ಸಲಹಾ ಸಮಿತಿ ಸದಸ್ಯರು ಮುಂತಾದವರು ಪಾಲ್ಗೊಂಡಿದ್ದರು. ಶಿವಾನಂದ ಕರ್ಜಗಿಮಠ ನಿರೂಪಿಸಿ ವಂದಿಸಿದರು