ವಿದೇಶಿ ವಸ್ತು ಮಾತ್ರವಲ್ಲ, ವಿಚಾರವನ್ನೂ ಧಿಕ್ಕರಿಸಿ: ಉಪೇಂದ್ರ

ಬೆಂಗಳೂರು, ಮೇ 19, ದೇಶಾದ್ಯಂತ   ಕೊರೋನಾ ಲಾಕ್ ಡೌನ್ ವಿಸ್ತರಣೆಯಾಗಿದೆ. ನಾಲ್ಕನೇ ಹಂತದ ಲಾಕ್ ಡೌನ್ ಹೊಸ ಮಾರ್ಗಸೂಚಿ   ಹಾಗೂ ವಿಸ್ತರಣೆಗೂ ಮುನ್ನ ಪ್ರಧಾನಿ ನರೇಂದ್ರ ಮೋದಿ ದೇಶವನ್ನುದ್ದೇಶಿಸಿ ಮಾಡಿದ್ದ ಭಾಷಣದಲ್ಲಿ   ಸ್ವದೇಶಿ ವಸ್ತುಗಳನ್ನು ಖರೀದಿಸಿ ಸ್ವದೇಶಿಯರ, ಸ್ಥಳೀಯರ ಪ್ರಗತಿಗೆ ಸಹಕರಿಸುವಂತೆ ಕೋರಿದ್ದರು. ಸ್ವದೇಶಿ ಜಾಗೃತಿ ಆಂದೋಲನ ಹಲವು ವರ್ಷಗಳಿಂದಲೇ   ಇದೆಯಾದರೂ, ಕೊರೋನಾ ಪ್ರಭಾವದ ಈ ಬಿಕ್ಕಟ್ಟಿನ ಸಂದರ್ಭದಲ್ಲಿ, ಪ್ರಧಾನಿಯವರು ನೀಡಿದ ಕರೆ  ಸಮಯೋಚಿತವಾಗಿದ್ದು, ಚರ್ಚೆಗೆ ಗ್ರಾಸವಾಗಿದೆ. ಇದೇ ವಿಷಯವಾಗಿ ಕನ್ನಡದ ನಟ, ಪ್ರಜಾಕೀಯ ಪಕ್ಷದ ಮುಖ್ಯಸ್ಥ ಉಪೇಂದ್ರ ಕೂಡ ಟ್ವಿಟರ್ ನಲ್ಲಿ ಪ್ರಸ್ತಾಪಿಸಿದ್ದು, ವಿದೇಶಿ ವಸ್ತುಗಳನ್ನು   ಮಾತ್ರವಲ್ಲ, ವಿಚಾರಗಳನ್ನೂ ಧಿಕ್ಕರಿಸುವಂತೆ ಮನವಿ ಮಾಡಿದ್ದಾರೆ. “ರೋಗ ಬರೋದು ದೇಹಕ್ಕೆ ಅಂತ ವಿದೇಶಿ ಶ್ರೀಮಂತರು ತಿಳ್ಕೊಂಡಿದ್ದಾರೆ, ಹೇಳಿದಾರೆ.  ಅದನ್ನ  ನಾವೂ ನಂಬಿದ್ದೀವಿ, ಖರೀದಿಸಿದ್ದೀವಿ.   ಆದರೆ ರೋಗ ಬರೋದು ಮನಸ್ಸಿಗೇ ಹೊರತು ದೇಹಕ್ಕಲ್ಲ    ಅಂತ ನಮ್ಮ ದೇಶದ ಅದೆಷ್ಟೋ ಸಾಧು ಸಂತರು ಹೇಳಿದ್ದನ್ನು ಮರೆತುಬಿಟ್ಟಿದ್ದೀವಿ” ಅಂತ ಉಪ್ಪಿ  ಬೇಸರಿಸಿದ್ದಾರೆ. ಹೀಗಾಗಿ ಸ್ವದೇಶಿ ವಿಚಾರ ಪುರಸ್ಕರಿಸಿ, ಸ್ವದೇಶಿ  ವಸ್ತುಗಳನ್ನೇ ಖರೀದಿಸಿ ಎಂದು ಅಭಿಮಾನಿಗಳಲ್ಲಿ, ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.