ಅಮೆರಿಕಾದಲ್ಲಿ ಮುಂದುವರಿದ ಪ್ರತಿಭಟನೆ; ಲಾಸ್ ಏಂಜಲೀಸ್ ನಲ್ಲಿ ಕರ್ಪ್ಯೂ ವಿಸ್ತರಣೆ

ವಾಷಿಂಗ್ಟನ್, ಜೂನ್ ೪,ಅಫ್ರಿಕಾ ಮೂಲದ ಅಮೇರಿಕಾ ಪ್ರಜೆ ಜಾರ್ಜ್ ಪ್ಲಾಯ್ಡ್ ಅವರ ಹತ್ಯೆಯನ್ನು  ಖಂಡಿಸಿ  ತೀವ್ರ  ಪ್ರತಿಭಟನೆ ನಡೆಸುತ್ತಿರುವ  ಹಿನ್ನಲೆಯಲ್ಲಿ ಲಾಸ್ ಏಂಜಲೀಸ್ ನಲ್ಲಿ      ಸ್ಥಳೀಯ ಅಧಿಕಾರಿಗಳು  ಸತತ ನಾಲ್ಕನೇ ಬಾರಿ  ಗುರುವಾರ  ರಾತ್ರಿಯೂ  ಕರ್ಪ್ಯೂ ಜಾರಿಗೊಳಿಸಿದ್ದಾರೆ.ಅಮೆರಿಕಾದಲ್ಲಿ  ಅತ್ಯಂತ ಜನಸಂಖ್ಯೆ ಹೊಂದಿರುವ  ಲಾಸ್ ಏಂಜಲೀಸ್ ನಲ್ಲಿ  ಸ್ಥಳೀಯ ಕಾಲಮಾನ ಬುಧವಾರ ರಾತ್ರಿ ೯ ಗಂಟೆಯಿಂದ ಗುರುವಾರ ಬೆಳಗ್ಗೆ ೫ ಗಂಟೆಯವರೆಗೆ ಕರ್ಪ್ಯೂ ವಿಧಿಸಲಾಗಿದೆ ಎಂದು ಅಧಿಕಾರಿಗಳು ಹೇಳಿಕೆಯಲ್ಲಿ ತಿಳಿಸಿದ್ದಾರೆಸಾರ್ವಜನಿಕ ಸುರಕ್ಷತೆಯ ಅಗತ್ಯತೆಯನ್ನು  ಪರಿಗಣಿಸಿ  ಲಾಸ್ ಏಂಜಲೀಸ್  ಹಿಂದಿನ ರಾತ್ರಿಗಳಿಂತೆ  ಇಂದು ರಾತ್ರಿಯೂ  ಕರ್ಫ್ಯೂ  ಜಾರಿಗೊಳಿಸಲಾಗಿದೆ. ಕರ್ಫ್ಯೂ ಸಮಯದಲ್ಲಿ  ಜನರು  ತಮ್ಮ ಮನೆಗಳಿಂದ ಹೊರಬರಬಾರದು ಎಂದುಅಧಿಕಾರಿಗಳು   ಜನರಿಗೆ ಮನವಿ ಮಾಡಿದ್ದಾರೆ.   ಒಂದೊಮ್ಮೆ  ಕರ್ಪ್ಯೂ  ಆದೇಶ ಉಲ್ಲಂಘನೆ  ಮಾಡಿದರೆ  , ೧,೦೦೦  ಡಾಲರ್  ದಂಡ ಅಥವಾ ಆರು ತಿಂಗಳು  ಜೈಲು ಶಿಕ್ಷೆ ಅಥವಾ ಎರಡೂ ಶಿಕ್ಷೆಗಳನ್ನು ವಿಧಿಸಬಹುದಾಗಿದೆ ಎಂದುಎಚ್ಚರಿಕೆ ನೀಡಿದ್ದಾರೆ.ಲಾಸ್ ಏಂಜಲೀಸ್ ಮೇಲ್ವಿಚಾರಕರ ಸಮಿತಿ  ಅಧ್ಯಕ್ಷೆ  ಕ್ಯಾಥರಿನ್ ಬಾರ್ಗರ್,  " ಶಾಂತಿಯುತ ಪ್ರತಿಭಟನಾಕಾರರನ್ನು ಬೆಂಬಲಿಸುತ್ತಿರುವ  ಸ್ಥಳೀಯ  ಜನರ   ತಾಳ್ಮೆ ಮತ್ತು ತಿಳುವಳಿಕೆಗೆ    ಧನ್ಯವಾದ  ಸಲ್ಲಿಸಿದ್ದಾರೆ