ಶಾಲಾ ವಿದ್ಯಾರ್ಥಿಗಳಿಗೆ 26 ರಿಂದ ಸಂವಿಧಾನ ಪಠಣ ಕಡ್ಡಾಯ

ಮುಂಬೈ, ಜನವರಿ 23,ಗಣರಾಜ್ಯ ದಿನವಾದ ಇದೇ  26 ರಿಂದ ಮಹಾರಾಷ್ಟ್ರದ ಶಾಲಾ  ವಿದ್ಯಾರ್ಥಿಗಳು ಬೆಳಗಿನ  ಸಭೆಯಲ್ಲಿ ಸಂವಿಧಾನದ ಪ್ರಸ್ತಾವನೆಯನ್ನು ಕಡ್ಡಾಯವಾಗಿ ಓದಬೇಕು ಎಂದು ಶಾಲಾ ಶಿಕ್ಷಣ ಸಚಿವೆ ವರ್ಷಾ ಗಾಯಕ್ವಾಡ್  ಕಟ್ಟಪ್ಪಣೆ ಮಾಡಿದ್ದಾರೆ. ಸಂವಿಧಾನದ ಪ್ರಸ್ತಾವನೆ ಓದುವುದು ಸಂವಿಧಾನದ ಸಾರ್ವಭೌಮತೆ, ಸರ್ವರ ಒಳಿತು, ಕಲ್ಯಾಣ ಅಭಿಯಾನದ ಒಂದು ಭಾಗವಾಗಿದೆ ಎಂದೂ ಸರಕಾರದ ಸುತ್ತೋಲೆ ಸ್ಪಷ್ಟಪಡಿಸಿದೆ. ಶಾಲೆಯಲ್ಲಿ ಪ್ರತಿದಿನ ಬೆಳಗಿನ ಪ್ರಾರ್ಥನೆ ಮುಗಿದ ನಂತರ  ವಿದ್ಯಾರ್ಥಿಗಳು ಸಂವಿಧಾನದ ಪ್ರಸ್ತಾವನೆ ಓದಬೇಕು. ಇದರಿಂದ ಅವರಿಗೆ ಸಂವಿಧಾನದ ಪ್ರಾಮುಖ್ಯತೆ ಅರಿವಾಗಲಿದೆ  ಇದು ಹಿಂದಿನ ಸರಕಾರ ನಿರ್ಣಯ. ಆದರೆ, ನಾವು ಇದನ್ನು  26ರಿಂದ ಜಾರಿಗೆ ತರುತ್ತಿದ್ದೇವೆ ಎಂದು ಅವರು ಹೇಳಿದರು.ಕಾಂಗ್ರೆಸ್-ಎನ್ಸಿಪಿ ಅಧಿಕಾರದ್ದಾಗ  ಇದಕ್ಕೆ ಸಂಬಂಧಿಸಿದಂತೆ 2013ರ  ಫೆಬ್ರವರಿಯಲ್ಲಿ ನಿರ್ಣಯ ಹೊರಡಿಸಲಾಗಿತ್ತು.