ರಾಣೇಬೆನ್ನೂರು: ಕಳೆದ ಐದು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ತಾಲೂಕಿನ ರೈತರ ಜಮೀನುಗಳು ಬಹುತೇಕ ಜಲಾವೃತಗೊಂಡು ಬೆಳೆಗಳು ಹಾನಿಗೊಳಗಾಗಿದ್ದ ಪ್ರದೇಶಗಳಿಗೆ ಶುಕ್ರವಾರ ತಹಶೀಲ್ದಾರ ಸಿ.ಎಸ್.ಕುಲಕಣರ್ಿ ಭೇಟಿ ನೀಡಿ ವೀಕ್ಷಣೆ ಮಾಡಿದರು.
ತಾಲೂಕಿನ ಗುಡಿಹೊನ್ನತ್ತಿ, ಕೆರೆಮಲ್ಲಾಪುರ, ಹೊಸಹೊನ್ನತ್ತಿ, ಹಳೆಹೊನ್ನತ್ತಿ, ಚೌಡಯ್ಯದಾನಪುರ, ಹರನಗಿರಿ, ಯತ್ನಳ್ಳಿ ಸೇರಿದಂತೆ ಮತ್ತಿತರ ಗ್ರಾಮಗಳಲ್ಲಿ ರೈತರು ಬೆಳೆದ ಬೆಳೆಗಳಾದ ಈರುಳ್ಳಿ, ಮೆಕ್ಕೆಜೋಳ ಸೇರಿದಂತೆ ಮತ್ತಿತರ ಬೆಳೆಗಳಿಗೆ ಭಾರೀ ಪ್ರಮಾಣದಲ್ಲಿ ಕರೆ ನೀರು ನುಗ್ಗಿ ಸಾಕಷ್ಟು ಪ್ರಮಾಣದಲ್ಲಿ ಹಾನಿಯಾಗಿತ್ತು. ಈಬಗ್ಗೆ ಯಾರೊಬ್ಬ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಬಾರದೆ ಇರುವುದಕ್ಕೆ ರೈತರು ಹಾಗೂ ಗ್ರಾಮಸ್ಥರು ಸಹ ಆಕ್ರೋಶ ವ್ಯಕ್ತಪಡಿಸಿದ್ದರು.
ಆದರೆ ಪತ್ರಿಕೆಗಳಲ್ಲಿ ವರದಿಗಳು ಪ್ರಕಟವಾಗಿದ್ದನ್ನು ಕಂಡು ತಾಲೂಕ ಆಡಳಿತ ಎಚ್ಚೆತ್ತುಕೊಂಡು ತಾಲೂಕಿನ ಹೊಸಹೊನ್ನತ್ತಿ, ಹಳೆಹೊನ್ನತ್ತಿ, ಕೆರೆಮಲ್ಲಾಪುರ ಮತ್ತು ಗುಡಿಹೊನ್ನತ್ತಿ ಗ್ರಾಮಗಳ ರೈತರ ಜಮೀನುಗಳಿಗೆ ಭೇಟಿ ನೀಡಿ ವೀಕ್ಷಣೆ ಮಾಡಿದರು. ರೈತರು ತಮ್ಮ ನೋವನ್ನು ವ್ಯಕ್ತಪಡಿಸುತ್ತ ತಹಶೀಲ್ದಾರವರ ಬಳಿ ಸೂಕ್ತ ಪಯರ್ಾಯ ವ್ಯವಸ್ಥೆ ನಮಗೆ ಕಲ್ಪಿಸಬೇಕು. ಹೀಗೆ ಇದು ಮುಂದು ವರೆದರೆ ನಾವು ಜೀವನ ನಡೆಸುವುದೇ ಕಷ್ಟ ಎಂದು ರೈತರು ತಮ್ಮ ಅಳಲುತೋಡಿಕೊಂಡರು.
ಮೂರು ದಿನಗಳಿಂದಲೂ ನಮ್ಮ ಜಮೀನುಗಳಲ್ಲಿ ನೀರು ಹರಿಯುತ್ತಿದೆ. ಇದರಿಂದ ಈರುಳ್ಳಿ, ಎಲೆಬಳ್ಳಿ ತೋಟ, ಮೆಕ್ಕೆ ಜೋಳ ಸಾಕಷ್ಟು ಪ್ರಮಾಣದಲ್ಲಿ ಹಾನಿಯಾಗಿವೆ. ಆದರೆ ಯಾವೊಬ್ಬ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಆಗಮಿಸಲಿಲ್ಲ. ಪತ್ರಿಕೆಗಳಲ್ಲಿ ಪ್ರಕಟವಾದ ಮೇಲೆ ನೀವು ಬಂದಿರುವಿರಿ. ಇದರ ಮೇಲೆ ಗೊತ್ತಾಗುತ್ತದೆ ನೀವು ಎಷ್ಟು ಬೇಜವಾಬ್ಧಾರಿ ತೋರುತ್ತಿದ್ದೀರಿ ಎಂದು ರೈತರು ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದರು.
ನಂತರ ರೈತರ ಮನವೊಲಿಸಿದ ತಹಶೀಲ್ದಾರ ಸಿ.ಎಸ್.ಕುಲಕಣರ್ಿಯವರು ಮಾತನಾಡಿ, ಪ್ರಕೃತಿ ವಿಕೋಪದಿಂದ ಅತೀವೃಷ್ಠಿಯಾಗಿ ಈ ಘಟನೆ ಸಂಭವಿಸಿದೆ. ಆದರೆ ಕೆರೆ ನೀರು ಕೋಡಿಬಿದ್ದ ಪರಿಣಾಮ ನೀರು ಹರಿದು ರೈತರ ಜಮೀನುಗಳಿಗೆ ನುಗ್ಗಿ ಹಾನಿಯಾಗಿದೆ. ಆದರೆ ರೈತರೂ ಸಹ ಹಿಂದಿನಿಂದಲೂ ಹಳ್ಳಗಳು ಎಂದು ಕರೆಯಲ್ಪಡುವ ಪ್ರದೇಶಗಳಲ್ಲಿ ಉಳುಮೆ ಮಾಡುತ್ತಿರುವುದು ಗಮನಕ್ಕೆ ಬಂದಿದೆ. ಹೀಗಾಗಿ ನೀರು ಅನಿವಾರ್ಯವಾಗಿ ನೀವು ಬೆಳೆದ ಜಮೀನುಗಳಲ್ಲಿ ನುಗ್ಗುತ್ತಿದೆ ಎಂದರು.
ಹಳ್ಳ ಎಂದು ಕರೆಯಲ್ಪಡುವ ಪ್ರದೇಶಗಳಲ್ಲಿ ನೀರು ಹರಿಯಲು ಜಾಗೆಯನ್ನು ಬಿಟ್ಟು ಕಾನೂನು ಪ್ರಕಾರವಾಗಿ ತಮ್ಮ ಜಮೀನುಗಳಲ್ಲಿ ಉಳುಮೆ ಮಾಡಿಕೊಂಡರೆ ಸೂಕ್ತ. ಹಾಗೂ ಇಂತಹ ಸನ್ನಿವೇಶಗಳ ನಡೆಯದಂತಾಗುತ್ತದೆ. ನೀರು ಹರಿದು ಅದು ತನ್ನ ಜಾಗಕ್ಕೆ ಸೇರುತ್ತದೆ. ಅದರ ಮೂಲ ಹರಿಯುವ ಸ್ಥಳವನ್ನು ಗುರುತಿಸಿ ಹಳ್ಳಗಳಲ್ಲಿಯೇ ನೀರು ಹರಿದು ಹೋಗುವಂತೆ ಮಾಡಲಾಗುವುದು ಎಂದರು.
ಇದುವರೆಗೂ ಹಾನಿಗೊಳಗಾದ ರೈತರ ಜಮೀನುಗಳನ್ನು ಸವರ್ೇ ಮಾಡಿ, ಅವರ ಆಧಾರ ಕಾಡರ್್, ಉತಾರ, ಬ್ಯಾಂಕ್ ಪಾಸ್ಬುಕ್ ಸೇರಿದಂತೆ ಇನ್ನಿತರ ದಾಖಲಾತಿಗಳನ್ನು ಪರಿಹಾರ ತಂತ್ರಾಂಶದಲ್ಲಿ ಅಜರ್ಿ ಹಾಕಿ, ಹಾನಿಗೊಳಗಾದ ರೈತರಿಗೆ ನೇರವಾಗಿ ಸರಕಾರವೇ ಹಣವನ್ನು ಭರಿಸುತ್ತೆ ಎಂದು ತಹಶೀಲ್ದಾರವರು ತಿಳಿಸಿದರು.
ಹಿರಿಯ ಸಹಾಯಕ ತೋಟಗಾರಿಕೆ ನಿದರ್ೇಶಕ ನೂರಹ್ಮದ ಹಲಗೇರಿ, ಕೃಷಿ ಇಲಾಖೆಯ ಅಧಿಕಾರಿಗಳು ಮತ್ತು ಗ್ರಾಪಂ ಅಧ್ಯಕ್ಷ ಬಸಯ್ಯ ಪೂಜಾರ, ಪಿಡಿಓ ಆರಾಧ್ಯಮಠ, ಸುರೇಶ ಮೇಡ್ಲೇರಿ, ವೀರಭದ್ರಪ್ಪ ಎರೇಶೀಮಿ, ಪ್ರದೀಪ ಬಣಕಾರ, ಅಶೋಕ ಮೇಡ್ಲೇರಿ, ಮಲ್ಲಿಕಾಜರ್ುನ ಎರೇಶೀಮಿ, ಸೇರಿದಂತೆ ಮತ್ತಿತರರು ಇದ್ದರು.