ಕೋವಿಡ್-19 ಚಿಕಿತ್ಸೆ ಕಂಡುಹಿಡಿಯುವಲ್ಲಿ ಗಣನೀಯ ಪ್ರಗತಿ; ಟ್ರಂಪ್

ವಾಷಿಂಗ್ಟನ್, ಏ 7,ಕೋವಿಡ್-19 ಸೋಂಕಿನ ವಿರುದ್ಧ ಚಿಕಿತ್ಸೆಗಳನ್ನು ಕಂಡುಹಿಡಿಯುವಲ್ಲಿ ಅಮೆರಿಕ ಸಾಕಷ್ಟು ಪ್ರಗತಿ ಸಾಧಿಸಿದೆ ಎಂದು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಔಷಧ ಕ್ಷೇತ್ರದಲ್ಲಿ ನಾವು ಸಾಕಷ್ಟುಸಾಧನೆ ಮಾಡಿದ್ದು, ಎರಡು ಕಂಪನಿಗಳು ಲಸಿಕೆಗಳನ್ನು ಅಭಿವೃದ್ಧಿಪಡಿಸಲು ಒಪ್ಪಿಗೆ ಸೂಚಿಸಿದ್ದು, ಹತ್ತು ಪ್ರಯೋಗಗಳು ಜಾರಿಯಲ್ಲಿವೆ ಎಂದರು. ಜೊತೆಗೆ,  ನ್ಯೂಜೆರ್ಸಿ ಹಾಗೂ ನ್ಯೂಯಾರ್ಕ್ ನ ಕೋವಿಡ್-19 ರೋಗಿಗಳನ್ನು ನೌಕಾಪಡೆಯ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲು ಅವಕಾಶ ಕಲ್ಪಿಸಲಾಗಿದೆ ಎಂದರು.ಈಗಾಗಲೇ ಅಮೆರಿಕದ ಆರೋಗ್ಯ ಕಾರ್ಯಕರ್ತರಿಗಾಗಿ ಪ್ರತಿ ತಿಂಗಳು 55.5 ಮಿಲಿಯನ್ ಮಾಸ್ಕ್ ತಯಾರಿಸಲು ಕಂಪನಿಗಳೊಂದಿಗೆ ಟ್ರಂಪ್ ಆಡಳಿತ ಒಪ್ಪಂದಕ್ಕೆ ಸಹಿ ಹಾಕಿದೆ. ಅಮೆರಿಕದಲ್ಲಿ ಸದ್ಯ 3.66  ಲಕ್ಷ ಸೊಂಕಿತ ಪ್ರಕರಣಗಳಿದ್ದು, ಮೃತರ ಸಂಖ್ಯೆ 10,700 ಕ್ಕೇರಿಕೆಯಾಗಿದೆ.