ಜಲ ಮೂಲಗಳ ಸಂರಕ್ಷಣೆ - ಪುನಶ್ಚೇತನ ಆದ್ಯತೆಯಾಗಲಿ

ಬೆಳಗಾವಿ: 11 :ಮುಂದಿನ ಪೀಳೀಗೆಗೆ ನಾವು ನೀರಿನ ಸಂರಕ್ಷಣೆ, ಸಮುದಾಯದ ನೈರ್ಮಲ್ಯ, ಬಗ್ಗೆ ಜಾಗೃತಿ ಮೂಡಿಸುವುದು ಮಹತ್ವವಾಗಿದ್ದು ಹಾಗೂ ಜಲಮೂಲಗಳು ಕಲುಸಿತವಾಗಿದೆ ಹಾಗೆ ನೋಡಿಕೊಂಡು ಅವುಗಳ ಸಂರಕ್ಷಣೆ ಹಾಗೂ ಪುನಶ್ಚೇತನಗೊಳಿಸುವುದು ನಮ್ಮ ಮೊದಲ ಆದ್ಯತಯಾಗಬೇಕು ಎಂದು ಬೆಳಗಾವಿ ಗ್ರಾಮಿಣ ಕುಡಿಯುವ ನೀರು ನೈರ್ಮಲ್ಯ ವಿಭಾಗದ ಕಾರ್ಯಪಾಲಕ ಅಭಿಯಂತರಾದ ಕೆ.ಎಸ್.ಅಸೊಟಿ ಕರೆ ನೀಡಿದರು.

ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗ ಬೆಳಗಾವಿ, ಜಿಲ್ಲಾ ಪಂಚಾಯತಿ ಬೆಳಗಾವಿ, ಯುನೈಟೆಡ್ ಸಮಾಜ ಕಲ್ಯಾಣ ಸಂಸ್ಥೆ ಬೆಳಗಾವಿ ಹಾಗೂ ಕಾರಲಗಾ ಗ್ರಾಮ ಪಂಚಾಯತಿ ಸಂಯುಕ್ತ ಆಶ್ರಯದಲ್ಲಿ ಖಾನಾಪುರ ತಾಲೂಕಿನ ಕಾರಲಗಾ ಗ್ರಾಮದ ಸಣ್ಣ ಜಲಮೂಲ (ಕೆರೆ) ಪುನಶ್ಚೇತನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಶ್ರಮಧಾನದ ಮೂಲಕ ಕೆರೆ ಸ್ವಚ್ಛತಾಕಾರ್ಯ ಮಾಡಲಾಯಿತು. ಪಿ ಆರ್ ಎ ಮೂಲಕ ಜಲ ಮೂಲಗಳ ಸಂರಕ್ಷಣೆ ಬಗ್ಗೆ ಸಂಸ್ಥೆಯ  ಎಂ ಕೆ ಕುಂದರಗಿ ಮಾಹಿತಿ ನಿಡಿದರು. 

ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ ಸದಸ್ಯರಾದ ಸುಪ್ರೀಯಾ ಗೊಪಾಲ ಕುಟ್ರೆ ಅವರು ಭೂಮಿ ಪೂಜೆ ನೇರವೇರಿಸಿದರು. ಗ್ರಾ. ಪಂ. ಅಧ್ಯಕ್ಷರಾದ ಬಲರಾಮ ಗುರವ, ಉಪಾದ್ಯಕ್ಷರಾದ ಇಂದಿರಾ ಡಿ ಪಾಟಿಲ, ಸದಸ್ಯರಾದ ರಾಮ ಕಡೋಲ್ಕರ, ಸಹಾಯಕ ಕಾರ್ಯಪಾಲಕ ಅಭಿಯಂತರಾದ ಸುಭಾಶ ನಾಯ್ಕ, ಕಿರಣ ಕಣ್ಣೂರ್ಕರ, ಹಿರಿಯ ಭೂಗರ್ಭ ತಜ್ಞ  ಎಸ್ ಜಿ ಜೋಶಿ,  ಗ್ರಾ ಪಂ ಸದಸ್ಯರು ಮತ್ತು ಗ್ರಾಮ ಪಂಚಾಯತಿ ಕಾರ್ಯದಶರ್ಿಯಾದ ಶಾಂತಾಬಾಯಿ ಕೋಲಕಾರ, 

 ಗ್ರಾ ಪಂ ಕುಡಿಯುವ ನೀರು ಹಾಗೂ ನೈಮರ್ುಲ್ಯ ಸಮಿತಿ ಸದಸ್ಯರಾದ ತಾವನಪ್ಪಾ ಲವಗಿ, ಸ್ವ-ಸಹಾಯ ಸಂಘದ ಸದಸ್ಯರು ಉಪಸ್ಥಿತರಿದ್ದರು.