ಮಾನವೀಯ ಧರ್ಮದ ಉಳಿವಿಗೆ ಕಾಂಗ್ರೆಸ್ ಹೋರಾಟ ನಡೆಸಿದೆ: ಶಾಸಕ ಮಾನೆ
ಹಾನಗಲ್ 13: ಸಂವಿಧಾನದ ಮೇಲೆ ನಿಷ್ಠೆ, ನಂಬಿಕೆ ಇಟ್ಟಿರುವ ಕಾಂಗ್ರೆಸ್ ಶರಣರು, ಸೂಫಿಗಳು ಪ್ರತಿಪಾದಿಸಿದ ಮಾನವೀಯ ಧರ್ಮದ ಉಳಿವಿಗೆ ಹೋರಾಟ ನಡೆಸಿದೆ ಎಂದು ಶಾಸಕ ಶ್ರೀನಿವಾಸ ಮಾನೆ ಹೇಳಿದರು. ಇಲ್ಲಿನ ತಮ್ಮ ಜನ ಸಂಪರ್ಕ ಕಚೇರಿಯಲ್ಲಿ ಶನಿವಾರ ಸಂಜೆ ನಡೆದ ಹಾನಗಲ್ ಬ್ಲಾಕ್ ಕಾಂಗ್ರೆಸ್ ವ್ಯಾಪ್ತಿಯ ಬೂತ್‌ಮಟ್ಟದಅಧ್ಯಕ್ಷರು ಮತ್ತು ಕಾರ್ಯದರ್ಶಿಗಳ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.ಬೆಂಕಿ ಹಚ್ಚಲು ಸಣ್ಣದೊಂದುಕಿಡಿ ಸಾಕು. ಬೆಂಕಿಯನ್ನು ಆರಿಸಿ ಪರಿಸ್ಥಿತಿ ತಿಳಿಗೊಳಿಸಲು ಸಾಕಷ್ಟು ಸಮಯಾವಕಾಶ ಹಿಡಿಯಲಿದೆ. ಹಾಗಾಗಿ ಬೆಂಕಿ ಹಚ್ಚಲು ಅವಕಾಶ ಸಿಗದಂತೆ ನಾವೆಲ್ಲರೂಜಾಗರೂಕರಾಗಬೇಕಿದೆ. ಸಣ್ಣಪುಟ್ಟ ವ್ಯತ್ಯಾಸ, ಭಿನ್ನಾಭಿಪ್ರಾಯಗಳನ್ನೆಲ್ಲ ಬದಿಗೆ ಸರಿಸಿ ಕಾಂಗ್ರೆಸ್ ಪಕ್ಷದ ಬೇರುಗಳನ್ನು ಸದೃಢಗೊಳಿಸಬೇಕಿದೆ.ಬಿಜೆಪಿ ಏನೇ ತಂತ್ರಗಳನ್ನು ಹೂಡಿದರೂ ಅವುಗಳು ಫಲಿಸದಂತೆ ಪ್ರತಿತಂತ್ರ ಹೂಡಬೇಕಿದೆ.ಕಾಂಗ್ರೆಸ್ ಪಕ್ಷದಿಂದ ಮಾತ್ರಜನಕಲ್ಯಾಣ ಸಾಧ್ಯವಿದೆ.ಎಲ್ಲರನ್ನೂಒಟ್ಟಿಗೆಕರೆದೊಯ್ಯಬಲ್ಲ ಶಕ್ತಿ ಕೇವಲ ಕಾಂಗ್ರೆಸ್ಸಿಗಷ್ಟೇ ಇದೆ.ಹಾಗಾಗಿ ಕೆಳಹಂತದಲ್ಲಿ ಸದಾ ಶಕ್ತಿ ತುಂಬುತ್ತಿರುವಕಾರ್ಯಕರ್ತರು ವಾಸ್ತವ ಅರಿತುಜನಜಾಗೃತಿ ಮೂಡಿಸಬೇಕಿದೆಎಂದರು. ಕೇಂದ್ರ ಸರ್ಕಾರದಅಸಹಕಾರ, ಆರ್ಥಿಕ ಸಂಕಷ್ಟದ ಮಧ್ಯೆರಾಜ್ಯದಲ್ಲಿ ಆಡಳಿತ ನಡೆಸಬೇಕಾದ ಸವಾಲು ಕಾಂಗ್ರೆಸ್ ಪಕ್ಷದ ಮುಂದಿದೆ.ಇಂಥ ಸಂದಿಗ್ಧ ಸಂದರ್ಭದಲ್ಲಿಕಾರ್ಯಕರ್ತರು ಪರಿಸ್ಥಿತಿ ಅರ್ಥ ಮಾಡಿಕೊಳ್ಳಬೇಕಿದೆ.ಹಿಂದೆಯಾವುದೇಯೋಜನೆ ರೂಪಿಸಿದರೂ ಕೂಡಅದರಲ್ಲಿ ಶೇ.80 ರಷ್ಟುಕೇಂದ್ರ ಹಾಗೂ ಕೇವಲ ಶೇ.20 ರಷ್ಟುರಾಜ್ಯ ಸರ್ಕಾರದಅನುದಾನದ ಪಾಲುದಾರಿಕೆಇರುತ್ತಿತ್ತು.ಅದೀಗ ಅದಲು ಬದಲಾಗಿದ್ದು, ಕೇಂದ್ರ ಕೇವಲ ಶೇ.20 ರಷ್ಟು ಪಾಲುದಾರಿಕೆ ಮಾತ್ರ ಉಳಿಸಿಕೊಂಡು ಕೈ ತೊಳೆದುಕೊಂಡಿದೆ.ಕನ್ನಡಿಗರ ಶ್ರಮದತೆರಿಗೆಯಲ್ಲಿಒಂದುರೂ.ಗೆ ಪ್ರತಿಯಾಗಿ ಕೇವಲ 13 ಪೈಸೆ ಮಾತ್ರ ನೀಡುತ್ತಿದೆ.ಸುಳ್ಳು ಹೇಳಿ ದಾರಿತಪ್ಪಿಸುತ್ತಿದೆ.ಪೆಟ್ರೋಲ್, ಡೀಸೆಲ್, ಸಿಲಿಂಡರ್ ಬೆಲೆ ಏರಿಸಿ ಜನರ ಗಮನ ಬೇರೆಡೆ ಸೆಳೆಯಲು ಜನಾಕ್ರೋಶಯಾತ್ರೆ ನಡೆಸುತ್ತಿದೆ.ಇಂಥ ಸಂದರ್ಭದಲ್ಲಿ ನಾವೆಲ್ಲರೂಜೊತೆಜೊತೆಗೆಗಟ್ಟಿ ಹೆಜ್ಜೆ ಹಾಕುವ ಮೂಲಕ ಜನವಿರೋಧಿ ಬಿಜೆಪಿಗೆ ಪಾಠ ಕಲಿಸಬೇಕಿದೆ.ಸಂವಿಧಾನದ ಉಳಿವಿಗೆ ಪಣತೊಡಬೇಕಿದೆಎಂದರು. ಬ್ಲಾಕ್‌ಕಾಂಗ್ರೆಸ್‌ಅಧ್ಯಕ್ಷ ಹನುಮಂತಪ್ಪ ಮರಗಡಿ ಮಾತನಾಡಿ, ತಾಲೂಕಿನಲ್ಲಿಕಾಂಗ್ರೆಸ್ ಪಕ್ಷದಕಾರ್ಯಕರ್ತರಿಗೆ ಶಾಸಕ ಶ್ರೀನಿವಾಸ ಮಾನೆ ಶಕ್ತಿ ತುಂಬುತ್ತಿದ್ದಾರೆ.ವ್ಯವಸ್ಥಿತ ಕಚೇರಿತೆರೆದುಜನರದೂರು, ದುಮ್ಮಾನಗಳಿಗೆ ಸ್ಪಂದಿಸುತ್ತಿದ್ದಾರೆ.ವಾರದಲ್ಲಿ ಕನಿಷ್ಟ ಮೂರ್ನಾಲ್ಕು ದಿನ ಕ್ಷೇತ್ರದಲ್ಲಿಯೇ ಲಭ್ಯರಿದ್ದುಸರ್ವತೋಮುಖಅಭಿವೃದ್ಧಿಗೆ ಕಾಳಜಿ ವಹಿಸಿದ್ದಾರೆ ಎಂದರು.ಹಾನಗಲ್ ಬ್ಲಾಕ್‌ಕಾಂಗ್ರೆಸ್ ವ್ಯಾಪ್ತಿಯ ಬೂತ್‌ಮಟ್ಟದಅಧ್ಯಕ್ಷರು, ಕಾರ್ಯದರ್ಶಿಗಳು, ವಿವಿಧ ಮುಂಚೂಣಿ ಘಟಕಗಳ ಪದಾಧಿಕಾರಿಗಳು, ಮುಖಂಡರು ಈ ಸಂದರ್ಭದಲ್ಲಿಇದ್ದರು. ಬಾಕ್ಸ್‌ಸಮಾಜದಲ್ಲಿ ಸದಾಕಾಲ ವ್ಯತ್ಯಾಸಗಳಿರಬೇಕು, ಮೇಲು-ಕೀಳು ಭಾವನೆ ಹೊಗೆಯಾಡುತ್ತಿರಬೇಕು. ಹಾಗಿದ್ದರೆ ಮಾತ್ರರಾಜಕೀಯ ಲಾಭ ಮಾಡಿಕೊಳ್ಳಬಹುದುಎನ್ನುವುದು ಬಿಜೆಪಿಯ ಬಯಕೆ. ಹಾಗಾಗಿಯೇ ಬರೀದ್ವೇಷ ಹರಡಿಸುವ ಕೆಲಸ ಮಾಡುತ್ತಿದೆ. ದ್ವೇಷದಿಂದ ಮಾಡಲಾಗದ್ದನ್ನು ಪ್ರೀತಿಯಿಂದ ಮಾಡಬಹುದುಎಂದು ನಾವೆಲ್ಲರೂ ತೋರಿಸಿಕೊಡಬೇಕಿದೆ.ಶ್ರೀನಿವಾಸ ಮಾನೆ, ಶಾಸಕ