ದೇಶದ ಎಲ್ಲ ಜಾತಿ, ಜನಾಂಗದವರಿಗೆ ಆದರ್ಶಪ್ರಾಯ ಬಿ.ಆರ್‌.ಅಂಬೇಡ್ಕರ್‌

B.R. Ambedkar is a role model for all castes and communities in the country.

ದೇಶದ ಎಲ್ಲ ಜಾತಿ, ಜನಾಂಗದವರಿಗೆ ಆದರ್ಶಪ್ರಾಯ ಬಿ.ಆರ್‌.ಅಂಬೇಡ್ಕರ್‌

ಕಂಪ್ಲಿ 15: ಶೋಷಿತ ಸಮುದಾಯಗಳು ಸಮಾಜದ ಮುಖ್ಯ ವಾಹಿನಿಗೆ ಬರಬೇಕೆಂದರೆ ಅದು ಶಿಕ್ಷಣದಿಂದ ಮಾತ್ರ ಸಾಧ್ಯ ಎಂಬುದನ್ನು ಜಗತ್ತಿಗೆ ತೋರಿಸಿಕೊಟ್ಟವರೇ ಸಂವಿಧಾನ ಶಿಲ್ಪಿ ಡಾ.ಅಂಬೇಡ್ಕರ್ ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿಯ ತಾಲೂಕು ಮುಖಂಡ ಹೆಚ್‌.ಗುಂಡಪ್ಪ ಹೇಳಿದರು.ತಾಲೂಕಿನ ನಂ.10 ಮುದ್ದಾಪುರ ಗ್ರಾಪಂಯ ಕಣವಿತಿಮ್ಮಲಾಪುರ ಗ್ರಾಮದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ(ಪ್ರೋ.ಕೃಷ್ಣಪ್ಪ ಸ್ಥಾಪಿತ)ಯಿಂದ ಆಯೋಜಿಸಿದ್ದ ಅಂಬೇಡ್ಕರ್ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ದೀನದಲಿತರ ಏಳಿಗೆಗಾಗಿ ಸಮಾನತೆಯ ಹಕ್ಕಿಗಾಗಿ ತಮ್ಮ ಜೀವನವನ್ನೇ ಮುಡಿಪಾಗಿರಿಸಿದವರು. ಮಹಿಳೆಯರ ಹಕ್ಕುಗಳಿಗಾಗಿ ಮಂತ್ರಿ ಪದವಿಗೆ ರಾಜೀನಾಮೆ ನೀಡಿದ ಮಹಾನ್ ವ್ಯಕ್ತಿ. ಹಾಡು ಮುಟ್ಟದ ಸೊಪ್ಪಿಲ್ಲ. ಅಂಬೇಡ್ಕರ್ ತಿಳಿಯದ ವಿಷಯವಿಲ್ಲ ಎಂಬುದನ್ನರಿತೇ ಅವರಿಗೆ ವಿಶ್ವ ಜ್ಞಾನಿ ಎನ್ನುವ ಪಟ್ಟ ಬಂದಿರುವುದು. ಅವರ ಜನ್ಮ ದಿನಾಚರಣೆಯನ್ನು ಭಾರತ ಮಾತ್ರವಲ್ಲದೆ ವಿಶ್ವವೇ ಹಬ್ಬವನ್ನಾಗಿ ಆಚರಿಸಲಾಗುತ್ತಿದೆ ಎಂದರು.  ಗ್ರಾಮ ಸಂಚಾಲಕ ಹೆಚ್‌.ಶಂಕ್ರ​‍್ಪ ಅಧ್ಯಕ್ಷತೆವಹಿಸಿ ಮಾತನಾಡಿ, ಅಂಬೇಡ್ಕರ್ ದಲಿತರಿಗೆ ಮಾತ್ರ ನಾಯಕರಾಗದೆ ಕಾರ್ಮಿಕರು, ಶೋಷಿತಸಮಾಜ, ಮಹಿಳೆಯರ ಹಕ್ಕಿಗಾಗಿ ಹೋರಾಡಿ ತಮ್ಮದೇ ವಿವೇಚನೆಯೊಂದಿಗೆ ಭಾರತದ ಸಂವಿಧಾನ ರಚಿಸಿ ತಳ ಸಮುದಾಯಗಳ ಏಳಿಗೆಗಾಗಿ ಹಾಗೂ ದೇಶದ ಎಲ್ಲ ಜಾತಿ ಜನಾಂಗದವರಿಗೆ ಆದರ್ಶಪ್ರಾಯ ವಾಗಿದ್ದಾರೆ. ಪ್ರತಿವರ್ಷ ಅವರ ಜನ್ಮ ದಿನಾಚರಣೆ ಆಚರಿಸಿಕೊಂಡು ಬರಲಾಗುತ್ತಿದೆ ಎಂದರು. ಸಾಧಕರಾದ ಪೊಲೀಸ್ ತಿಪ್ಪಯ್ಯ, ಜಗದೀಶ ಪೂಜಾರ ಇವರಿಗೆ ಸನ್ಮಾನಿಸಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಮುಖಂಡರಾದ ರಾಮಲಿಸ್ವಾಮಿ, ತಿಪ್ಪೇಸ್ವಾಮಿ, ವೆಂಕಟೇಶ, ಮಹಾದೇವ, ಪಂಪಾಪತಿ, ನಿಂಗಪ್ಪ, ಸಣ್ಣ ವೆಂಕಟೇಶ, ಊಳೂರು ಪಕ್ಕೀರ​‍್ಪ, ಗುಡಿಕಲ್ ವಿರೇಶ, ತಿಪ್ಪಯ್ಯ, ಕೆಕೆ.ಬಸಪ್ಪ, ಕೊಟ್ರೇಶ, ಗೌರಮ್ಮ ಸೇರಿದಂತೆ ಅನೇಕರಿದ್ದರು.