ಹಾವೇರಿ18 :ಕೇಂದ್ರ ಸರಕಾರದ ತೈಲ ಬೆಲೆ ಏರಿಕೆ ಖಂಡಿಸಿ, ಜಿಲ್ಲಾಕಾಂಗ್ರೆಸ್ಘಟಕದ ಮಹಿಳಾ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ನಗರದ ಮೈಲಾರ ಮಹದೇವಪ್ಪ ವೃತ್ತದಲ್ಲಿ ಕಾಂಗ್ರೆಸ್ ಪಕ್ಷದ ಮಹಿಳಾ ಘಟಕದ ಅಧ್ಯಕ್ಷೆ ಪ್ರೇಮಾ ಪಾಟೀಲ ನೇತೃತ್ವದಲ್ಲಿರಸ್ತೆಯ ಮೇಲೆ ಓಲೆ ಹೊತ್ತಿಸಿ ಕೇಂದ್ರ ಸರಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಕೇಂದ್ರ ಸರಕಾರ ಅಧಿಕಾರಕ್ಕೆ ಬಂದಾಗಿನಿಂದ ಬರಿ ಜನರನ್ನು ಒಂದಿಲ್ಲೊಂದು ಕಾರಣದ ಮೂಲಕ ಶೋಷಣೆ ಮಾಡಿಕೊಂಡು ಬರುತ್ತಿದೆ. ಅಧಿಕಾರಕ್ಕೆ ಬಂದು ಕೆಲವು ದಿನಗಳಲ್ಲಿ ಜನರಿಗೆ ಗ್ಯಾಸ್ ಸಿಲಿಂಡರ್ ನೀಡಿದ ಸರಕಾರ, ಈಗ ಕೊಟ್ಟ ಸಿಲಿಂಡರ್ ಮುಂದಿಟ್ಟುಕೊಂಡು ಸಾಮಾನ್ಯ ಜನರಿಂದ ಹಗಲು ದರೋಡೆ ಮಾಡುತ್ತಿದೆ. ದೇಶದಲ್ಲಿ ಜನರು ಪ್ರತಿನಿತ್ಯ ಕೋಟ್ಯಾಂತರ ಸಿಲಿಂಡರ್ಗಳನ್ನು ಉಪಯೋಗಿಸುತ್ತಿದ್ದು, ಇದರಿಂದ ಸರಕಾರಕ್ಕೆ ನಿತ್ಯ ಸಾವಿರಾರು ಕೋಟಿ ಕೊಳ್ಳೆ ಹೊಡೆಯಲಾಗುತ್ತಿದೆ ಎಂದು ದೂರಿದರು.
ಈ ಹಿಂದಿನ ಯು.ಪಿ.ಎ ಸರಕಾರದ ಅವಧಿಯಲ್ಲಿ 380ರಿಂದ 420 ರಲ್ಲಿದ್ದಗ್ಯಾಸ್ ಸಿಲಿಂಡರ್ ಬೆಲೆ ಇಂದು ಸಾವಿರಗಡಿದಾಟಿದೆ. ಈ ರೀತಿ ಸಾಮಾನ್ಯ ಜನರು ಉಪಯೋಗಿಸುವ ವಸ್ತುಗಳ ಬೆಲೆ ಏರಿಸುತ್ತ ಹೋದರೆ, ಬಡವರು, ಸಾಮಾನ್ಯರು ಹೇಗೆ ಜೀವನ ನಡೆಸಬೇಕು. ಕಳೆದ ಕೆಲ ದಿನಗಳ ಹಿಂದೆ ತರಕಾರಿ ಬೆಲೆಗಳು ಗಗನಕ್ಕೆ ಏರಿವೆ. ಇದೇ ಪರಿಸ್ಥಿತಿ ಮುಂದುವರೆದರೆ ಜನರು ದಂಗೆ ಏಳುವ ಪರಿಸ್ಥಿತಿ ನಿಮರ್ಾಣವಾಗುತ್ತದೆ. ಆದ್ದರಿಂದ ಸರಕಾರ ಎಚ್ಚತ್ತು ಕೊಂಡು ಏರಿಕೆ ಮಾಡಿರುವ ಬೆಲೆಗಳನ್ನು ಇಳಿಸಬೇಕು.ಇಲ್ಲದಿದ್ದರೆ ಕಾಂಗ್ರೆಸ್ ಪಕ್ಷದಿಂದ ಬೀದಿಗೆ ಇಳಿದು ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಪ್ರತಿಭಟನೆಯಲ್ಲಿ ಹಾವೇರಿ ತಾಲೂಕ ಅಧ್ಯಕ್ಷೆ ಅಸ್ಮಿತಾ ರಿತ್ತಿ,ಪ್ರೇಮಾ ಅಂಗಡಿ, ಶಶೀಕಲಾ ಹಾದ್ರಿಹಳ್ಳಿ, ಎಂ.ಎನ್.ಮೈದೂರ, ನದಾಫ್ ಸೇರಿದಂತೆ ಮುಂತಾದವರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.