ಕಾಂಗ್ರೆಸ್ ಸಂಸದರು ಗೂಂಡಾಗಳಂತೆ ವರ್ತಿಸಿದ್ದಾರೆ; ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಷಿ ಆಕ್ರೋಶ

ನವದೆಹಲಿ, ಫೆ ೭,ಲೋಕಸಭೆಯಲ್ಲಿ ಶುಕ್ರವಾರ   ಪ್ರತಿಪಕ್ಷ  ಕಾಂಗ್ರೆಸ್ ಸದಸ್ಯರ   ವರ್ತನೆ ಬಗ್ಗೆ   ಕೇಂದ್ರ  ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ   ತೀವ್ರ  ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಾಂಗ್ರೆಸ್  ನಾಯಕ  ರಾಹುಲ್ ಗಾಂಧಿ ಅವರ    ಪ್ರಚೋದನೆಯಿಂದ  ಕಾಂಗ್ರೆಸ್  ಸಂಸದರು  “ಗೂಂಡಾ” ಗಳಂತೆ  ವರ್ತಿಸಿದ್ದಾರೆ  ಎಂದು  ಆರೋಪಿಸಿದ್ದಾರೆ.  ರಾಹುಲ್ ಗಾಂಧಿ  ಅವರ   ಪ್ರೋತ್ಸಾಹದಿಂದ   ಪ್ರತಿಪಕ್ಷದ  ಸದಸ್ಯರು   ಸದನದಲ್ಲಿ  ಹೊಡೆದಾಟಕ್ಕೆ ಮುಂದಾಗಿದ್ದಾರೆ   ಆರೋಗ್ಯ  ಸಚಿವ  ಡಾ.ಹರ್ಷವರ್ಧನ್  ಅವರ ಮೇಲೆ ಮೇಲೆ ದಾಳಿ ನಡೆಸಲು ಸಹ ಪ್ರಯತ್ನಿಸಿದ್ದರಾರೆ.  ಕಾಂಗ್ರೆಸ್   ಅದೆಷ್ಟು ಹತಾಶೆಗೊಂಡಿದ್ದಾರೆ ಎಂಬುದು  ಅವರ ಗೂಂಡಾ ವರ್ತನೆ  ಇದು ಅರ್ಥವಾಗುತ್ತದೆ  ಎಂದು   ಸಚಿವ ಜೋಷಿ ಹೇಳಿದರು. ಪ್ರಧಾನಿ ನರೇಂದ್ರ ಮೋದಿ  ನಿನ್ನೆ   ಲೋಕಸಭೆಯಲ್ಲಿ ಕಾಂಗ್ರೆಸ್  ನಾಯಕ    ರಾಹುಲ್  ಗಾಂಧಿ  ಕುರಿತು  ನೀಡಿದ್ದ   ಟ್ಯೂಬ್ ಲೈಟ್   ಹೇಳಿಕೆಯನ್ನು   ಕೇಂದ್ರ ಮಂತ್ರಿ  ಡಾ. ಹರ್ಷವರ್ಧನ್  ಲೋಕಸಭೆಯಲ್ಲಿ   ಇಂದು  ಪ್ರಸ್ತಾಪಿಸಿದಾಗ,   ಕಾಂಗ್ರೆಸ್ ಮತ್ತು ಬಿಜೆಪಿ ಸಂಸದರ ನಡುವೆ ಘರ್ಷಣೆ  ಸೃಷ್ಟಿಸಿತು.  ರಾಹುಲ್ ಗಾಂಧಿ   ತಮ್ಮ  ಹೇಳಿಕೆಗೆ   ವಿವರಣೆ  ನೀಡಿ  ಕ್ಷಮೆಯಾಚಿಸಬೇಕು  ಎಂದು ಸಚಿವ  ಡಾ. ಹರ್ಷವರ್ಧನ್  ಆಗ್ರಹಿಸಿದಾಗ   ಕಾಂಗ್ರೆಸ್ ಮುಖಂಡರು ಆಕ್ರೋಶ ವ್ಯಕ್ತಪಡಿಸಿದರು.  ಹರ್ಷವರ್ಧನ್ ಅವರಿಂದಲೇ  ಕ್ಷಮೆಯಾಚಿಸಬೇಕೆಂದು ಒತ್ತಾಯಿಸಿರು.  ಕೇಂದ್ರ ಸಚಿವರು ನಿಂತಿರುವ   ಆಸನದತ್ತ   ನುಗ್ಗಿ   ಪ್ರತಿಭಟನೆ ನಡೆಸಿದರು. ಈ ಸಂದರ್ಭದಲ್ಲಿ  ಸಂಸದರೊಬ್ಬರು   ಸಚಿವರ  ಕೈ   ಹಿಡಿದುಕೊಳ್ಳಲು  ಪ್ರಯತ್ನಿಸುತ್ತಿದ್ದಂತೆ ಮತ್ತಷ್ಟು ಉದ್ವಿಗ್ನತೆ ಉಂಟಾಯಿತು. ಕಾಂಗ್ರೆಸ್ ನಾಯಕರ ವರ್ತನೆ  ಬಗ್ಗೆ   ಬಿಜೆಪಿ ಸಂಸದರು ಸ್ಪೀಕರ್‌ಗೆ ದೂರು ನೀಡುವುದಾಗಿ ಹೇಳಿದ್ದಾರೆ.