ಸರ್ಕಾರಿ ನೌಕರರ ಸಂಘದ ಪದಾಧಿಕಾರಿಗಳ ಅಭಿನಂದನಾ ಸನ್ಮಾನ
ರಾಣೇಬೆನ್ನೂರು 08 : ಇತ್ತೀಚೆಗೆ ನಡೆದ ಸರ್ಕಾರಿ ನೌಕರರ ಸಂಘಕ್ಕೆ ನೂತನವಾಗಿ ಆಯ್ಕೆಗೊಂಡ ಪದಾಧಿಕಾರಿಗಳಿಗೆ ನಿರ್ದೇಶಕರ ಅಭಿನಂದನಾ ಸಮಾರಂಭವು, ಅದ್ದೂರಿಯಾಗಿ, ನಡೆಯಿತು. ಇಲ್ಲಿನ ಎನ್ಜಿಒ ನೌಕರರ ಭವನದಲ್ಲಿ ನಡೆದ ಅಭಿನಂದನಾ ಕಾರ್ಯಕ್ರಮದಲ್ಲಿ ನಿರ್ದೇಶಕರಾಗಿ ಆಯ್ಕೆಯಾದ ಹುಲಿಕಟ್ಟಿ ಸರಕಾರಿ ಪ್ರೌಢಶಾಲೆಯ ಶಿಕ್ಷಕರಾದ ಮಂಜುನಾಥ್ ಹೆಚ್, ಜೋಯಿಸರ ಹರಳಲ್ಲಿ ಶಾಲೆಯ ಶಿಕ್ಷಕ ಹೇಮಗಿರಿ ಕೋರಿ, ಜಿಲ್ಲಾ ಸಂಘಕ್ಕೆ ಅಧ್ಯಕ್ಷರಾದ ಮಲ್ಲೇಶ್ ಕರಿಗಾರ ತಾಲೂಕ ನೌಕರರ ಸಂಘದ ನೂತನ ಅಧ್ಯಕ್ಷ ಅಶೋಕ ಕೆಂಚರೆಡ್ಡಿ , ಮಾಜಿ ಅಧ್ಯಕ್ಷ ಎಂ. ಡಿ. ದ್ಯಾಮಣ್ಣನವರ, ಜಿಲ್ಲಾ ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಅಧ್ಯಕ್ಷ ಮಲ್ಲಿಕಾರ್ಜುನ ಶಾಂತಗಿರಿ, ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಅಧ್ಯಕ್ಷ ರಮೇಶ್ ಆಳಲಗೇರಿ, ನಿವೃತ್ತ ಮುಖ್ಯೋಪಾಧ್ಯಾಯರಾದ ವ್ಹಿ. ಚೆನ್ನಮಲ್ಲಯ್ಯ,ಜಿ ಸುಮಾ,ಮೊದಲಾದವರನ್ನು ಅಭಿನಂದಿಸಿ ಸನ್ಮಾನಿಸಲಾಯಿತು. ವೇದಿಕೆಯಲ್ಲಿ ಜಗದೀಶ ಮಳಿಮಠ, ನಾಗರಾಜ ಮತೂ್ತೂರ, ಗಂಗಪ್ಪ ನಾಯಕ, ಆರ್. ಡಿ. ಹೊಂಬರಡಿ, ಚೇತನ, ವಿನುತಾ, ಸುಧಾ, ಸಂತೋಷ, ಸಂಘಟನೆಯ ಮತ್ತಿತರರು ಉಪಸ್ಥಿತರಿದ್ದರು.